ಮಮತಾ ಜೀ ನೀವು ನಿಮ್ಮ ಎಲ್ಲಾ ಮಿತಿಗಳನ್ನು ಮೀರಿದ್ದೀರಿ : ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ -Vishwanews24
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೆನ್ನೆಗೆ ಪ್ರಜಾಪ್ರಭುತ್ವದ ಹೊಡೆತ ನೀಡಬೇಕು ಎಂದು ಹೇಳಿಕೆ ನೀಡಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಎಲ್ಲಾ ಮಿತಿಗಳನ್ನು ಮೀರಿದ್ದಾರೆ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರು ಕಿಡಿ ಕಾರಿದ್ದಾರೆ.
ಮಮತಾ ವಿರುದ್ಧ ಟ್ವೀಟ್ ಮಾಡಿರುವ ಸುಷ್ಮಾ ‘ಮಮತಾ ಜಿ ನೀವು ಇಂದು ಎಲ್ಲಾ ಮಿತಿಗಳನ್ನು ಮೀರಿದ್ದೀರಿ. ನೀವು ಒಂದು ರಾಜ್ಯದ ಮುಖ್ಯಮಂತ್ರಿ, ಮೋದಿ ಅವರು ದೇಶದ ಪ್ರಧಾನ ಮಂತ್ರಿ. ನಾಳೆ ನೀವು ಅವರೊಂದಿಗೆ ಮಾತುಕತೆ ನಡೆಸಲೇ ಬೇಕು. ಹಾಗಾಗಿ ನಾನು ನಿಮಗೆ ಬಶೀರ್ ಬದ್ರ್ ಅವರ ಶಾಯಿರಿಯನ್ನು ನೆನಪಿಸುತ್ತಿದ್ದೇನೆ. ನನ್ನ ವಿರುದ್ಧ ಎಷ್ಟು ಬೇಕಾದರೂ ಹಗೆ ಸಾಧಿಸು, ಆದರೆ ಮುಂದೊಂದು ದಿನ ನಾವು ಸ್ನೇಹಿತರಾದಾಗ ಅದರಿಂದ ನಿನಗೆ ನಾಚಿಕೆಯಾಬಾರದು’ ಎಂದು ತಿಳಿಸಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿ ಕಾರಿದ ಮಮತಾ ಬ್ಯಾನರ್ಜಿ ‘ನನಗೆ ಹಣ ಮುಖ್ಯವಲ್ಲ. ಹಾಗಾಗಿಯೇ ಮೋದಿ ಅವರು ಬಂಗಾಳಕ್ಕೆ ಬಂದು ನಮ್ಮ ಪಕ್ಷವನ್ನು ತೊಲಾಬಾಜ್ (ಸಂಘಟಿತ ಸುಲಿಗೆ ಮಾಡುವವರು) ಎಂದು ಆರೋಪಿಸಿದ್ದಾರೆ. ಹೀಗಾಗಿ ಅವರ ಕೆನ್ನೆಗೆ ಪ್ರಜಾಪ್ರಭುತ್ವದ ಹೊಡೆತ ನೀಡಬೇಕು ಎನಿಸುತ್ತಿದೆ ಎಂದು ತಿಳಿಸಿದ್ದರು.
ममता जी – आज आपने सारी हदें पार कर दीं. आप प्रदेश की मुख्यमंत्री हैं और मोदी जी देश के प्रधान मंत्री हैं. कल आपको उन्हीं से बात करनी है. इसलिए बशीर बद्र का एक शेर याद दिला रही हूँ :
दुश्मनी जम कर करो लेकिन ये गुंजाइश रहे,
जब कभी हम दोस्त हो जाएँ तो शर्मिंदा न हों.— Sushma Swaraj (@SushmaSwaraj) May 7, 2019
