ಉಡುಪಿ: ವಿಧಾನಸಭಾ ಚುನಾವಣೆಯ ಪ್ರಯುಕ್ತ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣರ ಪರವಾಗಿ ಪಾದಯಾತ್ರೆಯ ಮೂಲಕ ಭರ್ಜರಿ ರೋಡ್ ಶೋ ಶುಕ್ರವಾರ ಮಲ್ಪೆಯಲ್ಲಿ ಜರುಗಿತು.
ಮಲ್ಪೆಯ ಏಳೂರು ಮೊಗವೀರ ಸಭಾಭವನದ ಬಳಿಯಿಂದ ಆರಂಭವಾದ ಪಾದಯಾತ್ರೆ ವಂಡಭಾಂಡೇಶ್ವರದ ಬಲರಾಮ ದೇವಸ್ಥಾನದ ಬಳಿ ಕೊನೆಗೊಂಡಿತು. ದಾರಿಯುದ್ದಕ್ಕೂ ಮೇರವಣಿಗೆಯಲ್ಲಿ ಕೇಸರಿ ಶಾಲುಗಳು ರಾರಾಜಿಸಿದ್ದು ಸಂಪೂರ್ಣ ಕೇಸರಿಮಯವಾಗಿತ್ತು.
ಉಡುಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಮಾತನಾಡಿ ‘1982 ರ ಸಂಧರ್ಭದಲ್ಲಿ ಪ್ರಥಮ ಬಾರಿಗೆ ಮೀನುಗಾರಿಕಾ ಇಲಾಖೆಗೆ ಡಿಸೇಲ್ ಸಬ್ಸಿಡಿಯನ್ನು ತಂದದ್ದು ಡಾಕ್ಟ ರ್ ವಿ ಎಸ್ ಆಚಾರ್ಯ ನವರು. ಕರಾವಳಿ ಭಾಗದ ಜನರು ಡಾಕ್ಟರ್ ವಿಎಸ್ ಆಚಾರ್ಯ ರನ್ನು ಎಂದಿಗೂ ಮರೆಯುವುದಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತ ಎಂಎಲ್ ಎ ಅಭ್ಯರ್ಥಿಯಾಗಲು ಸಾಧ್ಯ ರುವುದು ಬಿಜೆಪಿಯಲ್ಲಿ ಮಾತ್ರ. ಇವತ್ತು ನನ್ನ ಬಗ್ಗೆ ಬಹಳಷ್ಟು ಟೀಕೆ ಅಪಪ್ರಚಾರಗಳು ನಡೆಯುತ್ತಿವೆ. ನಾನು ಯಾವುತ್ತೂ ಪರ ಊರಿನಲ್ಲಿ ಇದ್ದುಕೊಂಡು ಕೇವಲ ಚುನಾವಣೆ ಮತ್ತು ಸಮಾರಂಭ ಗಳಿಗೆ ಈ ಊರಿಗೆ ಬಂದವನಲ್ಲ. ನನ್ನ ಬಾಲ್ಯದಿಂದಲೂ ನಾನು ಇದೇ ಊರಿನಲ್ಲಿ ಇದ್ದವ. ಸತತ 24 ಗಂಟೆ ಈ ಬಾಗದ ಜನರ ಜೊತೆ ಇದ್ದವನು ನಾನು. ಬೇರೆಯವರ ಹಾಗೆ ಬೇರೆ ಊರಿನಲ್ಲಿ ಇದ್ದುಕೊಂಡು ಸೀಟ್ ಗಿಟ್ಟಿಸಿ ಚುನವಣೆ ಸಂಧರ್ಬದಲ್ಲಿ ಬಂದು ನಾನು ನಿಮ್ಮ ಸೇವೆ ಮಾಡುತ್ತೇನೆ ಎನ್ನುವ ನಕಲಿ ವ್ಯಕ್ತಿ ನಾನಲ್ಲ. ಈ ಹಿಂದೆ ನಿಮ್ಮೊಂದಿಗೆ ಹೇಗೆ ಇದ್ದೆಯೇ ಮುಂದೆಯೂ ನಾನು ನಿಮ್ಮ ಸೇವಕನಾಗಿ ಇರುತ್ತೇನೆ. ಮಲ್ಪೆ ಮೀನುಗಾರಿಕಾ ಬಂದರಿನ ಸಮಗ್ರ ಅಭಿವೃದ್ದಿಯ ಮೂಲಕ ಕನಿಷ್ಠ 10000 ಮಂದಿ ಯುವಕರಿಗೆ ಇಲ್ಲಿಯೇ ಉದ್ಯೋಗ ಲಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದರು.
ಕಾರ್ಯಕ್ರಮದಲ್ಲಿ ಬೆಜೆಪಿ ಮುಖಂಡ ಹರಿಕೃಷ್ನ ಬಂಟ್ವಾಳ್, ಮಾಜಿ ರಕ್ಷಣಾ ಸಚಿವ ಕೆ ಆಂಟನಿ ಪುತ್ರ ಅನಿಲ್ ಆಂಟನಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಮುಖಂಡರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿ ಎನ್ ಶಂಕರ್ ಪೂಜಾರಿ, ಮಾಧ್ಯಮ ವಕ್ತಾರ ರಾಘವೇಂದ್ರ ಕಿಣಿ ಮತ್ತು ಇತರರು ಉಪಸ್ಥಿತರಿದ್ದರು,.
ಕೇಸರಿ ಶಾಲು ಧರಿಸಿದ ಸಾವಿರಾರು ಮಂದಿ ಜಯಘೋಷ ಕೂಗುತ್ತಾ ಪಾದಾಯಾತ್ರೆಯಲ್ಲಿ ಭಾಗವಹಿಸಿದರು.
ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…
ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ ಬೆಂಗಳೂರು: ನನಗೆ ಮದ…
ಎಂಆರ್‌ಪಿಎಲ್ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…
ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…
ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…