ಮಲ್ಪೆಯಲ್ಲಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣರಿಂದ ಭರ್ಜರಿ ರೋಡ್ ಶೋ – ಬೃಹತ್ ಪಾದಾಯಾತ್ರೆ ಮೂಲಕ ಮತಯಾಚನೆ  – Vishwanews24

Featured, ಉಡುಪಿ

ಮಲ್ಪೆಯಲ್ಲಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣರಿಂದ ಭರ್ಜರಿ ರೋಡ್ ಶೋ – ಬೃಹತ್ ಪಾದಾಯಾತ್ರೆ ಮೂಲಕ ಮತಯಾಚನೆ 

ಉಡುಪಿ: ವಿಧಾನಸಭಾ ಚುನಾವಣೆಯ ಪ್ರಯುಕ್ತ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣರ ಪರವಾಗಿ ಪಾದಯಾತ್ರೆಯ ಮೂಲಕ ಭರ್ಜರಿ ರೋಡ್ ಶೋ ಶುಕ್ರವಾರ ಮಲ್ಪೆಯಲ್ಲಿ ಜರುಗಿತು.

ಮಲ್ಪೆಯ ಏಳೂರು ಮೊಗವೀರ ಸಭಾಭವನದ ಬಳಿಯಿಂದ ಆರಂಭವಾದ ಪಾದಯಾತ್ರೆ ವಂಡಭಾಂಡೇಶ್ವರದ ಬಲರಾಮ ದೇವಸ್ಥಾನದ ಬಳಿ ಕೊನೆಗೊಂಡಿತು. ದಾರಿಯುದ್ದಕ್ಕೂ ಮೇರವಣಿಗೆಯಲ್ಲಿ ಕೇಸರಿ ಶಾಲುಗಳು ರಾರಾಜಿಸಿದ್ದು ಸಂಪೂರ್ಣ ಕೇಸರಿಮಯವಾಗಿತ್ತು.

May be an image of one or more people, crowd and temple

May be an image of 9 people

ಉಡುಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಮಾತನಾಡಿ ‘1982 ರ ಸಂಧರ್ಭದಲ್ಲಿ ಪ್ರಥಮ ಬಾರಿಗೆ ಮೀನುಗಾರಿಕಾ ಇಲಾಖೆಗೆ ಡಿಸೇಲ್ ಸಬ್ಸಿಡಿಯನ್ನು ತಂದದ್ದು ಡಾಕ್ಟ ರ್ ವಿ ಎಸ್ ಆಚಾರ್ಯ ನವರು. ಕರಾವಳಿ ಭಾಗದ ಜನರು ಡಾಕ್ಟರ್ ವಿಎಸ್ ಆಚಾರ್ಯ ರನ್ನು ಎಂದಿಗೂ ಮರೆಯುವುದಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತ ಎಂಎಲ್ ಎ ಅಭ್ಯರ್ಥಿಯಾಗಲು ಸಾಧ್ಯ ರುವುದು ಬಿಜೆಪಿಯಲ್ಲಿ ಮಾತ್ರ. ಇವತ್ತು ನನ್ನ ಬಗ್ಗೆ ಬಹಳಷ್ಟು ಟೀಕೆ ಅಪಪ್ರಚಾರಗಳು ನಡೆಯುತ್ತಿವೆ. ನಾನು ಯಾವುತ್ತೂ ಪರ ಊರಿನಲ್ಲಿ ಇದ್ದುಕೊಂಡು ಕೇವಲ ಚುನಾವಣೆ ಮತ್ತು ಸಮಾರಂಭ ಗಳಿಗೆ ಈ ಊರಿಗೆ ಬಂದವನಲ್ಲ. ನನ್ನ ಬಾಲ್ಯದಿಂದಲೂ ನಾನು ಇದೇ ಊರಿನಲ್ಲಿ ಇದ್ದವ. ಸತತ 24 ಗಂಟೆ ಈ ಬಾಗದ ಜನರ ಜೊತೆ ಇದ್ದವನು ನಾನು. ಬೇರೆಯವರ ಹಾಗೆ ಬೇರೆ ಊರಿನಲ್ಲಿ ಇದ್ದುಕೊಂಡು ಸೀಟ್ ಗಿಟ್ಟಿಸಿ ಚುನವಣೆ ಸಂಧರ್ಬದಲ್ಲಿ ಬಂದು ನಾನು ನಿಮ್ಮ ಸೇವೆ ಮಾಡುತ್ತೇನೆ ಎನ್ನುವ ನಕಲಿ ವ್ಯಕ್ತಿ ನಾನಲ್ಲ. ಈ ಹಿಂದೆ ನಿಮ್ಮೊಂದಿಗೆ ಹೇಗೆ ಇದ್ದೆಯೇ ಮುಂದೆಯೂ ನಾನು ನಿಮ್ಮ ಸೇವಕನಾಗಿ ಇರುತ್ತೇನೆ. ಮಲ್ಪೆ ಮೀನುಗಾರಿಕಾ ಬಂದರಿನ ಸಮಗ್ರ ಅಭಿವೃದ್ದಿಯ ಮೂಲಕ ಕನಿಷ್ಠ 10000 ಮಂದಿ ಯುವಕರಿಗೆ ಇಲ್ಲಿಯೇ ಉದ್ಯೋಗ ಲಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದರು.

May be an image of 4 people and text

May be an image of 7 people, temple and text

ಕಾರ್ಯಕ್ರಮದಲ್ಲಿ ಬೆಜೆಪಿ ಮುಖಂಡ ಹರಿಕೃಷ್ನ ಬಂಟ್ವಾಳ್, ಮಾಜಿ ರಕ್ಷಣಾ ಸಚಿವ ಕೆ ಆಂಟನಿ ಪುತ್ರ ಅನಿಲ್ ಆಂಟನಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಮುಖಂಡರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿ ಎನ್ ಶಂಕರ್ ಪೂಜಾರಿ, ಮಾಧ್ಯಮ ವಕ್ತಾರ ರಾಘವೇಂದ್ರ ಕಿಣಿ ಮತ್ತು ಇತರರು ಉಪಸ್ಥಿತರಿದ್ದರು,.

ಕೇಸರಿ ಶಾಲು ಧರಿಸಿದ ಸಾವಿರಾರು ಮಂದಿ ಜಯಘೋಷ ಕೂಗುತ್ತಾ ಪಾದಾಯಾತ್ರೆಯಲ್ಲಿ ಭಾಗವಹಿಸಿದರು.

May be an image of crowd and temple

May be an image of one or more people, crowd and text

May be an image of 1 person, temple, crowd and text

May be an image of 1 person, temple, crowd and text

ಹಿರಿಯಡ್ಕ ವೀರಭದ್ರಸ್ವಾಮಿ ಸಿರಿ ಸಿಂಗಾರ ಜಾತ್ರೆಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದ ವಿನಯ್ ಕುಮಾರ್ ಸೊರಕೆ – Vishwanews24

 

Leave a Reply