ಮಲ್ಪೆ: ಒಂದು ವರ್ಷದ ಮಗಳೊಂದಿಗೆ ತಾಯಿ ನಾಪತ್ತೆ – Vishwanews24
ಮಲ್ಪೆ: ಒಂದು ವರ್ಷದ ಮಗಳೊಂದಿಗೆ ತಾಯಿ ನಾಪತ್ತೆ
ಮಲ್ಪೆ:ಮಲ್ಪೆ ಸಮೀಪದ ಹೂಡೆ ಎಂಬಲ್ಲಿ ವಿವಾಹಿತ ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗಳೊಂದಿಗೆ ನಾಪತ್ತೆಯಾದ ಘಟನೆ ನಡೆದಿದೆ.
ಪಡುತೋನ್ಸೆ ಹೂಡೆ ನಿವಾಸಿ ಉಸ್ತಾದ್ ಜುಬೈರ್ (39) ಅವರ ಪತ್ನಿ ಅನ್ಸಿಯಾ (32) ಮತ್ತು ಅವರ ಒಂದು ವರ್ಷದ ಮಗಳು ಅಜೀನ್ ನಾಪತ್ತೆಯಾದವರು.
ಆನ್ಸಿಯಾ ನ.7ರಂದು ತನ್ನ ಮಗುವಿನೊಂದಿಗೆ ಬೆಳಗ್ಗೆ 10 ಗಂಟೆಗೆ ತಾನು ಕೆಲಸ ಮಾಡುತ್ತಿರುವ ಹೈರಿಚ್ ಕಚೇರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದು ಸಂಜೆ 5 ಗಂಟೆಯಾದರೂ ಮನೆಗೆ ಹಿಂತಿರುಗಿರಲಿಲ್ಲ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಲಸ್ಯದಿಂದ ಕೆಲಸದಲ್ಲಿ ಅಡೆತಡೆ.. ನೋಡಿ ಇಂದಿನ ದಿನ ಭವಿಷ್ಯ -Vishwanews24
