ಮಲ್ಪೆ: ಗ್ರಾ.ಪಂ.ಅಧ್ಯಕ್ಷೆಗೆ ಜಾತಿನಿಂದನೆ, ಜೀವಬೆದರಿಕೆ ; 8 ಮಂದಿ ವಿರುದ್ಧ ಪ್ರಕರಣ ದಾಖಲು – vishwanews24

Featured, ಉಡುಪಿ

ಮಲ್ಪೆ: ಗ್ರಾ.ಪಂ.ಅಧ್ಯಕ್ಷೆಗೆ ಜಾತಿನಿಂದನೆ, ಜೀವಬೆದರಿಕೆ – 8 ಮಂದಿ ವಿರುದ್ಧ ಪ್ರಕರಣ ದಾಖಲು

ಮಲ್ಪೆ: ತೆಂಕನಿಡಿಯೂರು ಗ್ರಾ.ಪಂ.ಅಧ್ಯಕ್ಷೆ ಶೋಭಾಗೆ ಜಾತಿ ನಿಂದನೆ ಮಾಡಿದ ಆರೋಪದಲ್ಲಿ 8 ಮಂದಿ ವಿರುದ್ಧ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದಲಿತ ನಿಂದನೆ ಪ್ರಕರಣ ದಾಖಲಾಗಿದೆ.

ಜೂ.28ರಂದು ಪಿಡಿಒ ದಯಾನಂದ ಅವರು ಎಸ್‌ಎಲ್‌ಆರ್‌ಎಂ ಘಟಕದಲ್ಲಿ ನೀರಿನ ಹರಿವಿಗೆ ಅಡಚಣೆಯಾಗಿರುವ ಕಾರಣಕ್ಕೆ ಸ್ಥಳಕ್ಕೆ ಬರುವಂತೆ ಹೇಳಿದ ಹಿನ್ನೆಲೆಯಲ್ಲಿ ಶೋಭಾ ಅವರು ಸಂಜೆ 5 ಗಂಟೆಗೆ ತೆಂಕನಿಡಿಯೂರು ಶ್ಮಶಾನದ ಬಳಿಯ ಎಸ್‌ಎಲ್‌ ಆರ್‌ಎಂ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಬಂದಿದ್ದರು.

ಜಲಪಾತದಲ್ಲಿ ಈಜಲು ಹೋದ ಯುವಕ ನೀರುಪಾಲು – vishwanews24

ಆಗ ಆರೋಪಿಗಳಾದ ಶರತ್‌ ಬೈಲಕೆರೆ, ಕಿರಣ ಪಿಂಟೋ, ವಿಜಯಪ್ರಕಾಶ್‌, ಗಾಯತ್ರಿ, ಪುಷ್ಪಾ, ಶಾಲಿನಿ, ಕೃಷ್ಣ ಶೆಟ್ಟಿ ಹಾಗೂ ಇತರರು ಸೇರಿ ಏಕವಚನದಲ್ಲಿ ಜಾತಿನಿಂದನೆ ಮಾಡಿ, ಹಲ್ಲೆ ನಡೆಸಲು ಮುಂದಾಗಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ. ತನ್ನನ್ನು ಅವರನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಬೇಕೆಂಬ ಉದ್ದೇಶವಿಟ್ಟುಕೊಂಡು ಈ ಕೃತ್ಯ ನಡೆಸಲಾಗಿದೆ ಎಂದು ಶೋಭಾ ಅವರು ಮಲ್ಪೆ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮಂಗಳೂರು: ಜೈಲಿನಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ; ಇಬ್ಬರಿಗೆ ಗಾಯ – vishwanews24

Leave a Reply