ಮಲ್ಪೆ: ಪ್ರವಾಸಿಗರಿಗೆ ಸಿಹಿಸುದ್ದಿ : ಸೈಂಟ್ ಮೇರೀಸ್ ಐಲ್ಯಾಂಡ್ ಪ್ರವೇಶಕ್ಕೆ ಅನುಮತಿ – Vishwanews24
ಮಲ್ಪೆ: ಪ್ರವಾಸಿಗರಿಗೆ ಸಿಹಿಸುದ್ದಿ : ಸೈಂಟ್ ಮೇರೀಸ್ ಐಲ್ಯಾಂಡ್ ಪ್ರವೇಶಕ್ಕೆ ಅನುಮತಿ
ಉಡುಪಿ : ಕರಾವಳಿಯ ಪ್ರಸಿದ್ಧ ಮಲ್ಪೆಯ ಸೈಂಟ್ ಮೇರೀಸ್ ಐ ಲ್ಯಾಂಡ್ ಇದೀಗ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ಮಳೆಯ ಹಿನ್ನೆಲೆಯಲ್ಲಿ ಸೈಂಟ್ ಮೇರಿಸ್ ಐಲಾಂಡ್ ಗೆ ಕೆಲ ಸಮಯದಿಂದ ಪ್ರವಾಸಿಗರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ನಿನ್ನೆ (ಅ.5) ಯಿಂದ ಮತ್ತೆ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಈ ಬಾರಿ ದ್ವೀಪದಲ್ಲಿ ಪ್ರವಾಸಿಗರಿಗಾಗಿ ಮತ್ತಷ್ಟು ವಿವಿಧ ಸೌಲಭ್ಯಗಳನ್ನು ಮಾಡಿಕೊಟ್ಟಿದ್ದು, ಪ್ರವಾಸಿಗರ ಸುರಕ್ಷತೆಗಾಗಿ ಮುಂಜಾಗೃತಾಕ್ರಮಗಳನ್ನು ಕೂಡಾ ಕೈಗೊಳ್ಳಲಾಗಿದೆ. ನೈಸರ್ಗಿಕ ವಸ್ತುಗಳ ಅರೆಕಾ, ತೆಂಗಿನ ಮರ ಮತ್ತು ತೆಂಗಿನ ಎಲೆಗಳಿಂದ ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ಅಲಂಕರಿಸಲಾಗಿದೆ. ಇಲ್ಲಿ ಪ್ರವೇಶ ಪಡೆಯಲು ಪ್ರತೀ ವ್ಯಕ್ತಿಗೆ 300 ರೂ. ದರ ನಿಗರಿಸಲಾಗಿದ್ದು, ಯಾವುದೇ ನಿಯಮಗಳ ಉಲ್ಲಂಘನೆ ಕಂಡು ಬಂದಲ್ಲಿ 500 ರೂ. ದಂಡವನ್ನು ವಿಧಿಸಲಾಗುತ್ತದೆ.

ಈ ದ್ವೀಪವು ಮಲ್ಪೆ ಬೀಚ್ ಅಭಿವೃದ್ಧಿ ನಿರ್ವಹನಾ ಸಮೀತಿ ಅಡಿಯಲ್ಲಿ ಇದ್ದರೂ ದ್ವೀಪದಿಂದ ಕಡಲ ತೀರಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಬರುವ ವ್ಯವಸ್ಥೆಯನ್ನು ಸ್ಥಳೀಯ ಖಾಸಗಿ ಬೋಟ್ ಮಾಲಕರು ನಿರ್ವಹಿಸುತ್ತಿದ್ದಾರೆ.
ಇಲ್ಲಿ 110 ಮೀ ಅಗಲ, 100 ಮೀ ಉದ್ದದೊಂದಿಗೆ ದ್ವೀಪದ ಈಶಾನ್ಯ ಭಾಗದಲ್ಲಿ ಈಜು ವಲಯವನ್ನು ಗುರುತಿಸಲಾಗಿದ್ದು, ಅಪಾಯಕಾರಿ 5 ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಎಚ್ಚರಿಕೆ ಫಲಕ ಮತ್ತು ಧ್ವಜವನ್ನು ಇರಿಸುವ ಮೂಲಕ ಪ್ರವಾಸಿಗರಿಗೆ ಸೂಚನೆ ನೀಡಲಾಗುತ್ತಿದೆ. ಹಾಗೂ ಸುರಕ್ಷತಾ ಜಾಕೆಟ್‍ಗಳು, ಲೈಫ್ ಗಾರ್ಡ್, ಪ್ರಥಮ ಚಿಕಿತ್ಸೆ ವ್ಯವಸ್ಥೆಗಳೊಂದಿಗೆ ಸ್ಥಿರವಾಗಿರುವ ಹಗ್ಗವನ್ನು 6 ವಿಭಿನ್ನ ಸ್ಥಳಗಳಲ್ಲಿ ನೇತುಹಾಕಲಾಗಿದೆ.
ವಿವಿಧ ಸ್ಥಳಗಳಲ್ಲಿ 4 ಗಡಿಯಾರ ಗೋಪುರಗಳಿದ್ದು, 7 ಸೆಲ್ಫಿ ಸ್ಟಾಟ್ ಗಳಲ್ಲಿ 3ನ್ನು ರಚಿಸಲಾಗಿದೆ.ಇದರೊಂದಿಗೆ ಇನ್ನೂ 4 ಸೆಲ್ಫಿ ಸ್ಟಾಟ್ ಗಳನ್ನು ಪ್ರವಾಸಿಗರ ಅನುಕೂಲಕ್ಕಾಗಿ ತೆರೆಯಲಾಗುತ್ತಿದೆ.
ದ್ವೀಪದಲ್ಲಿ ಪುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಮತ್ತು ವಸ್ತ್ರ ಬದಲಾವಣೆಯ ಕೋಣೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಲಗೇಜ್ ಕೊಠಡಿ ವ್ಯವಸ್ಥೆ ಕೂಡಾ ಇದ್ದು, ನಿಯಮಿತವಾಗಿ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನೂ ಕೈಗೊಳ್ಳಾಗುತ್ತಿದೆ. ಹಾಗೂ ದ್ವೀಪದಲ್ಲಿ ಹೊಂದಿರುವ ಹಲವು ನಿಯಮಗಳ ಬಗ್ಗೆ 2 ಫಲಕಗಳನ್ನು, 12 ಎಚ್ಚರಿಕೆ ಫಲಕ, ಅಪಾಯದ ಸೂಚನೆ ಫಲಕಗಳನ್ನು ಅಳವಡಿಸಲಾಗಿದೆ.

ಇನ್ನು ಪ್ರವಾಸಿಗರು ದ್ವೀಪವನ್ನು ಪ್ರವೇಶಿಸುವಾಗ ಮಗುವಿನ ಆಹಾರ ಮತ್ತು ಹಿರಿಯ ಔಷಧವನ್ನು ಹೊರತು ಪಡಿಸಿ ಪ್ಲಾಸ್ಟಿಕ್ ವಸ್ತುಗಳು, ಪ್ಲಾಸ್ಟಿಕ್ ನಲ್ಲಿ ಸುತ್ತಿದ ಆಹಾರ ಪದಾರ್ಥಗಳು, ಆಲ್ಕೋಹಾಲ್ ಮತ್ತು ಇತರ ವಸ್ತುಗಳನ್ನು ಸಾಗಿಸಲು ನಿರ್ಬಂಧಿಸಲಾಗಿದೆ. ಆದರೆ ಉಕ್ಕಿನ ಪಾತ್ರೆ ಮತ್ತು ತಟ್ಟೆಗಳಲ್ಲಿ ಆಹಾರವನ್ನು ಸಾಗಿಸಲು ಅನುಮತಿಸಲಾಗಿದೆ. ಇದರ ಜೊತೆಗೆ ದ್ವೀಪದಿಂದ ಬಂಡೆಗಳ ಚೂರು ಮತ್ತು ಯಾವುದೇ ಚಿಪ್ಪುಗಳನ್ನು ಸಾಗಿಸುವುದನ್ನು ನಿರ್ಭಂದಿಸಲಾಗಿದೆ.
ಇಲ್ಲಿನ ಸುರಕ್ಷತೆ ಹಾಗೂ ನಿರ್ವಹಣೆಗಾಗಿ 8 ಜೀವರಕ್ಷಕ ಸಿಬ್ಬಂದಿಗಳು, ಇಬ್ಬರು ಸ್ವಚ್ಚತಾ ಸಿಬ್ಬಂದಿ, ಓರ್ವ ಶೌಚಾಲಯ ನಿರ್ವಹಣೆ, 2 ಮೇಲ್ವಿಚಾರಕರು ಇದ್ದು, 7 ಆಹಾರ ಮಳಿಗೆಗಳು ಮತ್ತು ಸ್ಮರಣಿಕೆ ಕಿಯೋಸ್ಕ್ ಗಳಲ್ಲಿ ಸಿಬ್ಬಂದಿ, ಪ್ರವಾಸಿಗರ ಪ್ರವೇಶವನ್ನು ಮೇಲ್ವಿಚಾರಣೆ ಮಾಡಲು 3 ಪ್ರವೇಶ ದ್ವಾರ, 6 ಮಾರ್ಗದರ್ಶಿಗಳು ಸೂಚಕಗಳು (ಪ್ರಕ್ರಿಯೆಯಲ್ಲಿದೆ), ಜಲ ಕ್ರೀಡೆಗಳಲ್ಲಿ 10 ಸಿಬ್ಬಂದಿಗಳು ಇದ್ದಾರೆ.
ಕಾರ್ಕಳ: ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ; ಸವಾರ ಮೃತ್ಯು – Vishwanews24
ಇಲ್ಲಿ ಜಲ ಕ್ರೀಡೆಗಳ ಚಟುವಟಿಕೆಗಳಾದ ಜೆಟ್‍ಸ್ಕೀ, ಸ್ನೋರ್ಕೆಲ್ಲಿಂಗ್, ಕಯಾಕ್, ಕ್ಲಿಫ್ ಡೈವ್, ಸ್ಕೂಬಾ ಡೈವ್, ಪ್ಯಾರಾಸೈಲಿಂಗ್, ಬನಾನಾ ರೈಡ್, ಐಲ್ಯಾಂಡ್ ರೌಂಡಿಂಗ್, ಡಾಲ್ಫಿನ್ ಸೈಟ್, ಆಂಗ್ಲಿಂಗ್, ಎಸ್‍ಯುಪಿ, ಈಜು ವ್ಯವಸ್ಥೆ ಇದ್ದು, ವಿಶಾಂತಿಗಾಗಿ ಛತ್ರಿ ಕುರ್ಚಿ ಮತ್ತು ಚಾಪೆ ವ್ಯವಸ್ಥೆಯೂ ಇದೆ ಎಂದು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಣಧಿಕಾರಿ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
