ಉಡುಪಿ: ಮಲ್ಪೆಯ ಕಡಲ ಕಿನಾರೆಯಲ್ಲಿ ಮತ್ತೆ ತೇಲುವ ಸೇತುವೆ (ಫ್ಲೋಟಿಂಗ್ ಬ್ರಿಡ್ಜ್) ನಿರ್ಮಾಣವಾಗುತ್ತಿದ್ದು ಕೆಲವೇ ದಿನಗಳಲ್ಲಿ ಪ್ರವಾಸಿಗರಿಗೆ ಮುಕ್ತವಾಗಲಿದೆ.
ಕಳೆದ ಬಾರಿಯ ಅವಘಡ ಮತ್ತೊಮ್ಮೆ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಈ ಬಾರಿ ಹೊರ ರಾಜ್ಯ ಹಾಗೂ ರಾಜ್ಯದ ಕಡಲ ತಜ್ಞರ ತಂಡಗಳು ತೇಲುವ ಸೇತುವೆಯ ಸಾಮರ್ಥ್ಯ, ಕಾರ್ಯಕ್ಷಮತೆಯನ್ನು ಪರೀಕ್ಷೆಗೊಳಪಡಿಸಿ ದೃಢೀಕರಿಸಿವೆ.
ತೇಲುವ ಸೇತುವೆ ಚಂಡಮಾರುತದಂತಹ ಪ್ರತಿಕೂಲ ವಾತಾವರಣವನ್ನು ತಡೆದುಕೊಳ್ಳಬಹುದೇ? ದೈತ್ಯ ಅಲೆಗಳು ಅಪ್ಪಳಿಸಿದರೆ ತಾಳಿಕೊಳ್ಳುವುದೇ ಎಂಬುದನ್ನು ವೈಜ್ಞಾನಿಕವಾಗಿ ಪರೀಕ್ಷೆ ಗೊಳಪಡಿಸಿದೆ.
ಜತೆಗೆ, ಅಲೆಗಳ ಏರಿಳಿತ, ಪ್ರತಿಕೂಲ ವಾತಾವರಣ ಹಾಗೂ ಸೇತುವೆ ಅಳವಡಿಸುವ ಜಾಗವನ್ನು ಪರಿಶೀಲಿಸಿರುವ ತಂಡ ಶೀಘ್ರ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಿದೆ. ಅಲ್ಲಿಂದ ಒಪ್ಪಿಗೆ ಸಿಕ್ಕ ಬಳಿಕ ತೇಲುವೆ ಸೇತುವೆ ಪ್ರವಾಸಿಗರ ಬಳಕೆಗೆ ಲಭ್ಯವಾಗಲಿದೆ.
ಗುಣಮಟ್ಟದ ಸೇತುವೆ:
ಕಳೆದ ಮೇನಲ್ಲಿ ಅಳವಡಿಸಲಾಗಿದ್ದ ತೇಲುವ ಸೇತುವೆ ಹಾಳಾಗಲು ಹಲವು ಕಾರಣಗಳಿವೆ. ಸೇತುವೆ ಅಳವಡಿಸಿದ ಕೂಡಲೇ ಚಂಡಮಾರುತ ಬೀಸಿದ್ದರಿಂದ ದೈತ್ಯ ಅಲೆಗಳು ಅಪ್ಪಳಿಸಿ ಸೇತುವೆಗೆ ಹಾನಿಯಾಯಿತು. ಸೇತುವೆಗೆ ಅಳವಡಿಸಿದ್ದ ಫಾಂಟೂನ್ಸ್‌ಗಳು ಕಿತ್ತುಬಂದಿದ್ದವು.
ಕಳೆದ ಬಾರಿಯ ತಪ್ಪು ಮತ್ತೊಮ್ಮೆ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಅತ್ಯುತ್ತಮ ಗುಣಮಟ್ಟದ ತೇಲುವ ಸೇತುವೆಯನ್ನು ಹೊರಗಗಿನಿಂದ ಆಮದು ಮಾಡಿಕೊಂಡು ಅಳವಡಿಸಲಾಗಿದೆ ಎನ್ನುತ್ತಾರೆ ಮಲ್ಪೆ ಬೀಚ್‌ನ ಕಾರ್ಯ ನಿರ್ವಾಹಕ ಸುದೇಶ್ ಶೆಟ್ಟಿ.
ಗರಿಷ್ಠ ಸುರಕ್ಷತೆ:
ಸೇತುವೆ ಅಳವಡಿಸಿರುವ ಜಾಗದಲ್ಲಿ 2.5 ಮೀಟರ್ ಆಳ ಮಾತ್ರ ಇದ್ದು, ಪ್ರಾಣಾಪಾಯವಾಗುವ ಸಾಧ್ಯತೆಗಳು ತೀರಾ ಕಡಿಮೆ. ಆದರೂ ಪ್ರವಾಸಿಗರ ಸುರಕ್ಷತೆಗೆ ಗರಿಷ್ಠ ಒತ್ತು ನೀಡಲಾಗಿದೆ. 20 ಮಂದಿ ಲೈಫ್‌ಗಾರ್ಡ್‌ಗಳನ್ನು ನಿಯೋಜಿಸಲಾಗುವುದು. ಸೇತುವೆ ಹತ್ತುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೈಫ್
ಜಾಕೆಟ್ ಧರಿಸಬೇಕು.
ಸೇತುವೆಯ ಮೇಲೆ ಏಕಕಾಲಕ್ಕೆ 100ಕ್ಕೂ ಹೆಚ್ಚು ಮಂದಿ ನಡೆಯಬಹುದು. ಅಲೆಗಳ ಏರಿಳಿತಕ್ಕೆ ತಕ್ಕಂತೆ ಸೇತುವೆ ತೇಲಾಡುವಾಗ ರೋಚಕ ಅನುಭವ ದೊರೆಯಲಿದೆ. ಸೇತುವೆಯ ಕೊನೆಯಲ್ಲಿ ನಿಂತು ಸಮುದ್ರದ ಅಲೆಗಳ ಸೌಂದರ್ಯವನ್ನು ಹತ್ತಿರದಿಂದ ಆಸ್ವಾದಿಸಬಹುದು. ಅಲೆಗಳೊಟ್ಟಿಗೆ ಹೆಜ್ಜೆ ಹಾಕಬಹುದು ಎನ್ನುತ್ತಾರೆ ಸುದೇಶ್ ಶೆಟ್ಟಿ.
‘ರಾಜ್ಯದ ಮೊದಲ ತೇಲುವ ಸೇತುವೆ’
ಮಲ್ಪೆಯ ತೇಲುವ ಸೇತುವೆಯು ಸಮುದ್ರ ತೀರದಲ್ಲಿ ಅಳವಡಿಸಿರುವ ರಾಜ್ಯದ ಮೊದಲ ತೇಲುವ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗಲಿದೆ. ಪ್ರವಾಸಿಗರಿಗೆ ತೇಲುವ ಸೇತುವೆ ನಿಜಕ್ಕೂ ಹೊಸ ಅನುಭವ ನೀಡಲಿದೆ.
– ಸುದೇಶ್ ಶೆಟ್ಟಿ, ಬೀಚ್ ನಿರ್ವಾಹಕ
ಸಾಮಾಜಿಕ ಜಾಲತಾಣದಲ್ಲಿ ವೈರಲ್
2022, ಮೇ 6ರಂದು ಮಲ್ಪೆಯಲ್ಲಿ ರಾಜ್ಯದ ಮೊದಲ ತೇಲುವ ಸೇತುವೆಯನ್ನು ನಿರ್ಮಿಸಲಾಗಿತ್ತು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ನಗರಸಭೆ ಸಹಕಾರದಲ್ಲಿ ಮಲ್ಪೆ ಬೀಚ್ ನಿರ್ವಹಣಾ ಸಮಿತಿ ಹಾಗೂ ಸ್ಥಳೀಯ ಸಂಘಟನೆಗಳು ಖಾಸಗಿಯಾಗಿ ₹ 80 ಲಕ್ಷ ವೆಚ್ಚದಲ್ಲಿ ತೇಲುವ ಸೇತುವೆ ನಿರ್ಮಿಸಿದ್ದವು. ಮೂರೇ ದಿನಗಳಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಸೇತುವೆ ಹಾಳಾಗಿತ್ತು. ಸೇತುವೆ ಹಾಳಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಮೈಸೂರು: ಕಾಲೇಜು ಕ್ಯಾಂಪಸ್ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…