ಮಳೆಯನ್ನು ಲೆಕ್ಕಿಸದೆ ಕಾಪು ಬಿಜೆಪಿ ಯುವಮೋರ್ಚ” ವಿಕಾಸ ತೀರ್ಥ” ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ ಕಾರ್ಯಕರ್ತರು- ಸುಭದ್ರ ದೇಶ ನಿರ್ಮಾಣಕ್ಕೆ ಮೋದಿ ಸರ್ಕಾರ ಅಗತ್ಯ ಎಂದು ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್:vishwanews24
ಮಳೆಯನ್ನು ಲೆಕ್ಕಿಸದೆ ಕಾಪು ಬಿಜೆಪಿ ಯುವಮೋರ್ಚ” ವಿಕಾಸ ತೀರ್ಥ” ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ ಕಾರ್ಯಕರ್ತರು- ಸುಭದ್ರ ದೇಶ ನಿರ್ಮಾಣಕ್ಕೆ ಮೋದಿ ಸರ್ಕಾರ ಅಗತ್ಯ ಎಂದು ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್:vishwanews24
ಕಾಪು: ಭಾರತೀಯ ಜನತಾ ಪಾರ್ಟಿ ಕಾಪು ವಿಧಾನ ಸಭಾ ಕ್ಷೇತ್ರ ಯುವಮೋರ್ಚ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ೮ ವರ್ಷಗಳ ಸುದೀರ್ಘ ಆಡಳಿತವನ್ನು ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಕಾಪುವಿನಿಂದ ಬೈಕ್ ರ‍್ಯಾಲಿ ನಡೆಯಿತು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ” ದೇಶ ಸುಭದ್ರವಾಗಿದೆ ಕೊಟ್ಟಿರುವ ಭರವಸೆಗಳನ್ನು ಕೇಂದ್ರ ಸರ್ಕಾರ ಪೂರ್ಣಗೊಳಿಸುತ್ತಿದೆ ಭ್ರಷ್ಟಾಚಾರ ರಹಿತವಾದ ಆಡಳಿತ ನೀಡುವಲ್ಲಿ ಮೋದಿ ನೇತೃತ್ವದ ಸರ್ಕಾರ ಯಶಶ್ವಿಯಾಗಿದೆ ಹಾಗಾಗಿ ಈ ರ‍್ಯಾಲಿ ಅತ್ಯಂತ ಅರ್ಥಪೂರ್ಣವಾಗಿದೆ ಎಂದರು ಮಾತ್ರವಲ್ಲಿದೆ ಮುಂದಿನ ಎಲ್ಲಾ ಚುನಾವಣೆಗಳು ಕೂ ಬೆಜೆಪಿಗೆ ಪೂರಕವಾಗಲಿದೆ ಎಲ್ಲಾ ರಂಗದಲ್ಲೂ ಬಿಜೆಪಿ ಆಡಳಿತ ನಡೆಸುತ್ತಿದೆ ಎಂದರು.

ಜಡಿ ಮಳೆಯನ್ನು ಲೆಕ್ಕಿಸದೆ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ ನೂರಾರು ಕಾರ್ಯಕರ್ತರು-
ಕಾಪು ಜನಾರ್ಧನ ದೇವಸ್ಥಾನದ ವಠಾರದಿಂದ ಬೈಕ್ ರ‍್ಯಾಲಿ ಆರಂಭಗೊಳ್ಳುತ್ತಿದ್ದAತೆ ಜೋರಾಗಿ ಮಳೆ ಸುರಿದರು ಕಾರ್ಯಕರ್ತರ ಹುಮ್ಮಸ್ಸು ಕುಗ್ಗದೆ ಬೈಕ್ ರ‍್ಯಾಲಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾಪು ಪೇಟೆಯಲ್ಲಿ ಸಮಾರೋಪಗೊಂಡಿತು.

ಈ ಸಂಧರ್ಭದಲ್ಲಿ ಶಾಸಕ ಲಾಲಾಜಿ ಆರ್ ಮೆಂಡನ್, ಮಟ್ಟಾರು ರತ್ನಾಕರ ಹೆಗ್ಡೆ, ಯಶ್ಪಾಲ್ ಸುವರ್ಣ,ಸುರೇಶ್ ಶೆಟ್ಟಿ ಗುರ್ಮೆ,ವೀಣಾ ಶೆಟ್ಟಿ, ಶ್ರೀಕಾಂತ್ ನಾಯಕ್, ಗೀತಾಂಜಲಿ ಸುವರ್ಣ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಕ್ಯಾತ್ ಶೆಟ್ಟಿ ಕಾರ್ಕಳ,ಕಾಪು ಯುವಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ,ಪಧಾಧಿಕಾರಿಗಳಾದ ಶರತ್ ಶೆಟ್ಟಿ ಕುಂದಾಪುರ,ಸೋನು ಪೂಜಾರಿ ಪಾಂಗಾಳ,ಧೀರೆಶ್ ಡಿ ಪಿ ಮೂಳೂರು,ಚಿತ್ತನ್ ಮೂಳೂರು,ಮೊದಲಾದವರು ಉಪಸ್ಥಿತರಿದ್ದರು.
