ಮಸಾಜ್ ಪಾರ್ಲರ್ ಮೇಲೆ ದಾಳಿ ಪ್ರಕರಣ : ಪ್ರಸಾದ್ ಅತ್ತಾವರ ಸೇರಿ 11 ಮಂದಿಗೆ ಜಾಮೀನು ಮಂಜೂರು – vishwanews24
ಮಸಾಜ್ ಪಾರ್ಲರ್ ಮೇಲೆ ದಾಳಿ ಪ್ರಕರಣ : ಪ್ರಸಾದ್ ಅತ್ತಾವರ ಸೇರಿ 11 ಮಂದಿಗೆ ಜಾಮೀನು
ಮಂಗಳೂರು: ಬಿಜೈನಲ್ಲಿರುವ ಕಲರ್ಸ್ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ರಾಮಸೇನೆಯ ಮುಖಂಡ ಪ್ರಸಾದ್ ಅತ್ತಾವರ ಸೇರಿದಂತೆ 11 ಮಂದಿ ಕಾರ್ಯಕರ್ತರಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜನವರಿ 23ರಂದು ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್ ನಲ್ಲಿ ಕಲರ್ಸ್ ಯೂನಿಸೆಕ್ಸ್ ಸೆಲೂನ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ರಾಮ ಸೇನೆಯ ಕಾರ್ಯಕರ್ತರು ದಾಳಿ ಎಸಗಿದ್ದರು. ಕೃತೃದ ಸಂದರ್ಭದಲ್ಲಿ ಪೀಠೋಪಕರಣಗಳನ್ನು ಧ್ವಂಸ ಮಾಡಿ ಅಲ್ಲಿದ್ದ ಮಹಿಳಾ ಸಿಬಂದಿಗೆ ಜೀವ ಬೆದರಿಕೆ ಹಾಕಿದ್ದರು. ಘಟನೆ ಸಂಬಂಧಿಸಿ ಸೆಲೂನ್ ಮಾಲೀಕ ಸುಧೀರ್ ಶೆಟ್ಟಿ ಬರ್ಕೆ ಠಾಣೆಗೆ ದೂರು ನೀಡಿದ್ದರು.
ತಿರುಪತಿ ರೈಲು: ಮುರ್ಡೇಶ್ವರ, ಕುಂದಾಪುರ ,ಉಡುಪಿಯಲ್ಲಿ ಉತ್ತಮ ಸ್ಪಂದನೆ – vishwanews24
ಬರ್ಕೆ ಪೊಲೀಸರು ಪ್ರಸಾದ್ ಅತ್ತಾವರ ಸೇರಿದಂತೆ 14 ಮಂದಿಯನ್ನು ಬಂಧಿಸಿದ್ದು ಮಂಗಳೂರಿನ 6ನೇ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಎಲ್ಲ ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿಗಳ ಪರವಾಗಿ ವಕೀಲ ಮಯೂರ ಕೀರ್ತಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಪ್ರಸಾದ್ ಅತ್ತಾವರ್ ಮತ್ತು ಇತರ ಹತ್ತು ಮಂದಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
