ಮಹಾನ್ ಸಂತ ಗುರೂಜಿ ಸಾಯಿಈಶ್ವರ್ ಇವರಿಗೆ ‘ವಿಶಿಷ್ಟ ಸೇವಾ ಅವಾರ್ಡ್‌’ ನೀಡಿ ಗೌರವ -Vishwanews24

Featured, ಉಡುಪಿ, ಜಿಲ್ಲೆ, ರಾಜ್ಯ ನ್ಯೂಸ್

ಬೆಂಗಳೂರು: ಮಹಾನ್ ಸಂತ ಗುರೂಜಿ ಸಾಯಿಈಶ್ವರ್ ಇವರಿಗೆ “i stand with ” ಸಂಸ್ಥೆಯು ಪ್ರತಿ ವರ್ಷ ನೀಡುವ ಸೇವಾ ಅವಾರ್ಡ್ಸ್‌ನಲ್ಲಿ “ಸೇವಾ ವಿಶಿಷ್ಟ ಅವಾರ್ಡ್” ನೀಡಿ ಗೌರವಿಸಿತು.

ಬೆಂಗಳೂರು ಪೋಲಿಸ್ ಕಮಿಷನರ್ ಬಾಸ್ಕರ್ ರಾವ್ ಪ್ರಶಸ್ತಿಯನ್ನು ನೀಡಿದರು,ಖ್ಯಾತ ನಟ ಸಾಯಿ ಕುಮಾರ್ ಫಲಕ ನೀಡಿದರು.

ವೇದಿಕೆಯ ಮೇಲೆ i stand for nation ಇದರ ರಾಷ್ಟ್ರೀಯ ಅಧ್ಯಕ್ಷರಾದ ಹಬೀಬ್ ಸುಲ್ತಾನ್, ರಾಷ್ಟ್ರೀಯ ಉಪಾಧ್ಯಕ್ಷರಾದ ಹರಿಕೃಷ್ಣ, ಮುಕ್ಕದುಲ್ಲಾರಿ ಬೇಗಮ್,ಸಂಸ್ಥಯ ಕರ್ನಾಟಕ ಅಧ್ಯಕ್ಷರಾದ ರತನ್ ರಾಜು ಉಪಸ್ಥಿತರಿದ್ದರು.

ಈ ಪ್ರಶಸ್ತಿಯನ್ನು ಕರ್ನಾಟಕದಲ್ಲಿ ಪ್ರಥಮವಾಗಿ ನೀಡಲಾಗುತ್ತಿದ್ದು,ದೇಶದ ಇಪ್ಪತ್ತು ಸೇವಾ ಸಂಸ್ಥೆಗಳು ಹಾಗು ವ್ಯಕ್ತಿಗಳಿಗೆ ಈ ಗೌರವ ಪ್ರಶಸ್ತಿ ನೀಡಲಾಯಿತು.

ಸಭಾ ಕಾರ್ಯಕ್ರಮದ ನಂತರ ಭಾರತೀಯ ಉಡುಪುಗಳ ವಿಶೇಷ ಪ್ಯಾಶನ್ ಶೋ ನಡೆಯಿತು.