ಮಹಾಮಾರಿ ಕೊರೋನಾ ವೈರಸ್ – ಸಾವಿನ ಸಂಖ್ಯೆ 2,244ಕ್ಕೆ ಏರಿಕೆ -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಬೀಜಿಂಗ್: ಮಹಾಮಾರಿ ಕೊರೋನಾ ವೈರಸ್ ನಿಂದ ಸಾವಿನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಿದ್ದು, ಸದ್ಯ ಸಾವಿನ ಸಂಖ್ಯೆ 2,244 ತಲುಪಿದೆ. ಇದರಿಂದಾಗಿ ಚೀನಾದಲ್ಲಿ ಸಿಲುಕಿಕೊಂಡಿರುವ ಭಾರತೀಯರ ಸ್ಥಳಾಂತರ ಕೂಡ ವಿಳಂಬಗೊಳ್ಳುವಂತಾಗಿದೆ.

ವೈರಸ್ ಗೆ ಹೊಸದಾಗಿ 115 ಮಂದಿ ಬಲಿಯಾಗಿದ್ದು, ಇದರಿಂದಾಗಿ ಸಾವಿನ ಸಂಖ್ಯೆ 2,244 ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿತರ ಸಂಖ್ಯೆ 74,576ಕ್ಕೆ ತಲುಪಿದೆ ಎಂದು ವರದಿಗಳು ತಿಳಿಸಿವೆ. ಈ ಪೈಕಿ 56303 ಜನರು ಇನ್ನೂ ಗುಣಮುಖರಾಗಿಲ್ಲ. 11864 ಜನರ ಸ್ಥಿತಿ ಗಂಭೀರವಾಗಿದೆ. 16155 ಜನರು ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ವಾಪಸ್ ಕಳುಹಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಹೇಳಿಕೆ ತಿಳಿಸಿದೆ.

ಈ ನಡುವೆ ಚೀನಾದಲ್ಲಿ ಆತಂತಕ್ಕೀಡಾಗಿರುವ ಭಾರತೀಯ ರಕ್ಷಣೆಗೆ ಭಾರತೀಯ ವಾಯುಪಡೆ ಮುಂದಾಗಿದ್ದು, ಸೋಂಕು ಹೆಚ್ಚುತ್ತಿರುವ ಕಾರಣ ಭಾರತೀಯ ಸ್ಥಳಾಂತರ ಕಾರ್ಯ ಕೂಡ ವಿಳಂಬವಾಗುತ್ತಿದೆ.

ಸೋಂಕು ತಗುಲಿದವರಿಗೆ ತೀವ್ರ ಶೀತ, ಕೆಮ್ಮು, ಗಂಟಲು ಕಟ್ಟುವಿಕೆ, ಉಸಿರಾಟದ ತೊಂದರೆ, ತಲೆನೋವು, ಜ್ವರದ ಸಮಸ್ಯೆಗಳು ಉಂಟಾಗುತ್ತವೆ. ಬಳಿಕ ಇದು ನ್ಯೂಮೋನಿಯಾ ಹಾಗೂ ಕಿಡ್ನಿಗಳಿಗೆ ಹಾನಿಯುಂಟು ಮಾಡುತ್ತದೆ. ಕೊರೋನಾ ವೈರಸ್ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ ಕೂಡ ಆಗಿದ್ದು, ವೈರಸ್ ಹರಡದಂತೆ ಅದನ್ನು ನಿಯಂತ್ರಣದಲ್ಲಿಡಲು ಹಾಗೂ ತಡೆಗಟ್ಟಲು ಇಡೀ ವಿಶ್ವವೇ ಹರಸಾಹಸ ಪಡುತ್ತಿದೆ.