Featured

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. 2022-23 ನೇ ಸಾಲಿನಲ್ಲಿ 16 ಕೋಟಿ ಲಾಭ : ಯಶ್‍ಪಾಲ್ ಎ. ಸುವರ್ಣ

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. 2022-23 ನೇ ಸಾಲಿನಲ್ಲಿ 16 ಕೋಟಿ ಲಾಭ : ಯಶ್‍ಪಾಲ್ ಎ. ಸುವರ್ಣ

ಕರಾವಳಿ ಭಾಗದ ಪ್ರತಿಷ್ಟಿತ ಪಟ್ಟಣ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ೨೦೨೨-೨೩ನೇ ಸಾಲಿನಲ್ಲಿ ರೂ. ೮೧೨.೧೯ ಕೋಟಿ ವ್ಯವಹಾರ ನಡೆಸಿ ರೂ. ೧೬ ಕೋಟಿ ಲಾಭ ದಾಖಲಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ಮಹಾಲಕ್ಷ್ಮೀ  ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೮ ಶಾಖೆಗಳ ೨೮,೦೦೦ ಸದಸ್ಯರು ಹಾಗೂ ೩೫,೦೦೦ ಗ್ರಾಹಕರ ಮೂಲಕ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ ೨೦೨೨-೨೩ನೇ ಸಾಲಿನಲ್ಲಿ ೪೭೫ ಕೋಟಿ ಠೇವಣಿ, ೩೩೯ ಕೋಟಿ ಸಾಲ ಮತ್ತು ಮುಂಗಡದೊAದಿಗೆ, ರೂ. ೨೮.೪೨ ಕೋಟಿ ಪಾಲು ಬಂಡವಾಳದೊ0ದಿಗೆ, ಹಣಕಾಸು ವರ್ಷದಲ್ಲಿ ಠೇವಣಿ ಸಂಗ್ರಹಣೆಯಲ್ಲಿ ೨೯%, ಸಾಲ ಮತ್ತು ಮುಂಗಡ ೨೪%, ಪಾಲು ಬಂಡವಾಳ ೪೬% ಪ್ರಗತಿ ಸಾಧಿಸಿದೆ.

ಕಳೆದ ೧೪ ವರ್ಷಗಳಿಂದ ನಿರಂತರವಾಗಿ ಸದಸ್ಯ ಗ್ರಾಹಕರಿಗೆ ೧೮% ಡಿವಿಡೆಂಡ್ ನೀಡುವ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್, ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯನ್ನು ಪಡೆದಿದೆ. ೬೯ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ವತಿಯಿಂದ ಉತ್ತಮ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರ ಕ್ಷೇತ್ರವನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಬ್ಯಾಂಕಿನ ಮಲ್ಪೆ, ಕುಂದಾಪುರ, ಮಂಗಳೂರು, ಸುರತ್ಕಲ್ ಶಾಖೆ ಹಾಗೂ ಆಡಳಿತ ಕಚೇರಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಶಾಖೆಗಳಲ್ಲಿ ರಾಷ್ಟಿçÃಕೃತ ಬ್ಯಾಂಕಿಗೆ ಸರಿಸಮನಾಗಿ ಮೊಬೈಲ್ ಬ್ಯಾಂಕಿAಗ್, ಐಎಂಪಿಎಸ್ ಸೇವೆ ಸಹಿತ ಆಧುನಿಕ ಬ್ಯಾಂಕಿ0ಗ್ ವ್ಯವಸ್ಥೆಯೊಂದಿಗೆ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ಸಬ್ಸಿಡಿಯ ಮೊತ್ತ ನೇರ ಜಮೆ ಮಾಡಲು ಗ್ರಾಹಕರ ಖಾತೆಗಳು ಮಾನ್ಯತೆ ಹೊಂದಿದೆ.

ಮಹಾಲಕ್ಷ್ಮೀ  ಬ್ಯಾಂಕ್ ಗ್ರಾಹಕರ ಹಾಗೂ ಸಂಘ ಸಂಸ್ಥೆಗಳ ಠೇವಣಿಗಳಿಗೆ ಆಕರ್ಷಕ ಬಡ್ಡಿದರ ಹಾಗೂ ಎಲ್ಲಾ ಬಗೆಯ ಸಾಲ ಸೌಲಭ್ಯಗಳು ಕನಿಷ್ಟ ಬಡ್ಡಿದರದಲ್ಲಿ ಗ್ರಾಹಕರಿಗೆ ಒದಗಿಸಲಾಗಿದೆ.

ಈ ಹಣಕಾಸು ವರ್ಷದಲ್ಲಿ ಬ್ಯಾಂಕಿನ ಕಾರ್ಯಕ್ಷಮತೆಗೆ ಪೂರಕವಾಗಿ ಆಡಳಿತ ಕಚೇರಿಯನ್ನು ವಿಸ್ತರಿಸಲಾಗಿದ್ದು, ಕುಂದಾಪುರ ಮತ್ತು ಗಂಗೊಳ್ಳಿ ಶಾಖೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗ್ರಾಹಕರ ಸಮಾವೇಶವನ್ನು ನಡೆಸಲಾಗಿದೆ. ಬ್ಯಾಂಕಿನ ವತಿಯಿಂದ ೧೫೦೦ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರೂ. ೨೫ ಲಕ್ಷ ವೆಚ್ಚದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಶಾಲಾ ದಿನಗಳಲ್ಲಿಯೇ ಬ್ಯಾಂಕಿAಗ್ ವ್ಯವಸ್ಥೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮಹಾಲಕ್ಷ್ಮೀ ವಿದ್ಯಾಸಿರಿ ಝೀರೋ ಬ್ಯಾಲೆನ್ಸ್ ಖಾತೆ ಸೌಲಭ್ಯ, ಮಲ್ಪೆ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಗೆ ಶುಧ್ಧ ಕುಡಿಯುವ ನೀರಿನ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೋಟಿ ಕಂಠ ಗಾಯನ ಕಾರ್ಯಕ್ರಮ ಸಮುದ್ರ ಮಧ್ಯದಲ್ಲಿ ಆಯೋಜನೆ, ಉಚ್ಚಿಲ ದಸರಾ ಮಹೋತ್ಸವದ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಿದ್ದು, ಕಾಮನ್ ವೆಲ್ತ್ ಪದಕ ವಿಜೇತ ಗುರುರಾಜ್ ಪೂಜಾರಿ ಯವರಿಗೆ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ರಾಷ್ಟçಧ್ವಜ ಹಸ್ತಾಂತರಿಸಿ ಸನ್ಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣಾರ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಶ್ರೀಮತಿ ಶಾಂತಾ ವಿ. ಆಚಾರ್ಯರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಿ ಗೌರವಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ.

ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರದಲ್ಲಿ ಸಹಕರಿಸಿದ ಸರ್ವರಿಗೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಬ್ಯಾಂಕಿನ ಪ್ರಗತಿಗೆ ಸರ್ವರ ಸಲಹೆ ಸಹಕಾರವನ್ನು ಯಾಚಿಸುವುದಾಗಿ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

**
ಗ್ರಾಹಕ ಸ್ನೇಹಿ ಸೇವೆಯೊಂದಿಗೆ ಸದಸ್ಯರ ಹಾಗೂ ಗ್ರಾಹಕರ ಸಹಕಾರದಿಂದ ನಿರಂತರ ಪ್ರಗತಿ ಸಾಧಿಸುತ್ತಿರುವ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಶೀಘ್ರದಲ್ಲೇ ಸ್ವಂತ ಐ. ಎಫ್. ಎಸ್. ಸಿ. ಕೋಡ್ ಹೊಂದುವ ಮೂಲಕ ಕರಾವಳಿ ಭಾಗದ ಪ್ರಪ್ರಥಮ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಯಶ್‌ಪಾಲ್ ಎ. ಸುವರ್ಣ
ಅಧ್ಯಕ್ಷರು

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ.

Vishwa News 24

Recent Posts

ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‌ ವಿತರಣೆ – vishwanews24

ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‌ ವಿತರಣೆ ಮಂಗಳೂರು: ತಡೆಗೋಡೆ…

47 minutes ago

ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ರಿಯಾಕ್ಷನ್ – vishwanews24

ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ಫಸ್ಟ್ ರಿಯಾಕ್ಷನ್ ಆಡಿಯೋ ಧ್ವನಿ ತಮ್ಮದಲ್ಲ ಎಂದು ಸದಾನಂದಗೌಡರೇ ಹೇಳಿದ್ದಾರೆ ;…

55 minutes ago

ಬೆಳಗಾವಿ : ಜುಲೈ 10 ರಿಂದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ – vishwanews24

ಬೆಳಗಾವಿ : ಜುಲೈ 10 ರಿಂದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಜು.6 ಕ್ಕೆ ಬೆಳಗಾವಿಗೆ…

1 hour ago

ಸಪ್ತಪದಿ ಸೇರಿ ಅಗತ್ಯ ವಿಧಿ-ವಿಧಾನಗಳು ನೆರವೇರಿದಾಗ ಮಾತ್ರ ಹಿಂದೂ ವಿವಾಹ ಮಾನ್ಯ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು – vishwanews24

ಸಪ್ತಪದಿ ಸೇರಿ ಅಗತ್ಯ ವಿಧಿ-ವಿಧಾನಗಳು ನೆರವೇರಿದಾಗ ಮಾತ್ರ ಹಿಂದೂ ವಿವಾಹ ಮಾನ್ಯ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ಅಹಮದಾಬಾದ್: ಕೇವಲ…

1 hour ago

ಪಾನ್ ಮಸಾಲಾ, ಗುಟ್ಕಾ ಮಾರಾಟ  ಬ್ಯಾನ್ ಎಚ್ಚರಿಕೆ ನೀಡಿದ್ದ ಸಿಎಂ : ರಾಜ್ಯದಲ್ಲಿ 32 ಪಾನ್ ಮಸಾಲಾ ಮಾದರಿ ಸಂಗ್ರಹ – vishwanews24

ಪಾನ್ ಮಸಾಲಾ, ಗುಟ್ಕಾ ಮಾರಾಟ  ಬ್ಯಾನ್ ಎಚ್ಚರಿಕೆ ನೀಡಿದ್ದ ಸಿಎಂ:  ರಾಜ್ಯದಲ್ಲಿ 32 ಪಾನ್ ಮಸಾಲಾ ಮಾದರಿ ಸಂಗ್ರಹ ಬೆಂಗಳೂರು:…

1 hour ago

ರಾಮನಗರ : ಕ್ರಷರ್ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ – vishwanews24

ರಾಮನಗರ : ಕ್ರಷರ್ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ ರಾಮನಗರ: ರಾಮನಗರ ಜಿಲ್ಲೆಯ ಬೆಂಗಳೂರು…

2 hours ago