ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಮಂಗಳೂರಿಗೂ ಬಂತು ರಾಣಿ ಅಬ್ಬಕ್ಕ ಪೊಲೀಸ್ ಪಡೆ -Vishwanews24
ಮಂಗಳೂರು,: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಮಂಗಳೂರು ನಗರದಲ್ಲೂ ರಾಣಿ ಅಬ್ಬಕ್ಕ ಮಹಿಳಾ ಗಸ್ತು ಪೊಲೀಸ್ ಪಡೆ ಕಾರ್ಯನಿರ್ವಹಿಸಲು ಸಿದ್ಧತೆ ನಡೆಸಿದೆ.
ಬೆಳಗಾವಿ ಪೊಲೀಸ್ ಇಲಾಖೆಯ ಚೆನ್ನಮ್ಮ ಪಡೆ, ಚಿತ್ರದುರ್ಗದ ಓಬವ್ವ ಪಡೆ ಮಾದರಿಯಲ್ಲಿ ನಗರದಲ್ಲೂ ಅಬ್ಬಕ್ಕ ಪಡೆ ಕಾರ್ಯಾಚರಣೆಗಿಳಿಯಲಿದೆ. ಉಡುಪಿಯಲ್ಲಿ ಇತ್ತೀಚೆಗೆ ಅಬ್ಬಕ್ಕ ಪಡೆಗೆ ಚಾಲನೆ ನೀಡಲಾಗಿದೆ. ಎರಡು ವರ್ಷಗಳ ಹಿಂದೆ ಚಂದ್ರಶೇಖರ್ ಪೊಲೀಸ್ ಆಯುಕ್ತರಾಗಿದ್ದ ಸಂದರ್ಭ ಅಬ್ಬಕ್ಕ ಪಡೆ ಸ್ಥಾಪನೆ ಬಗ್ಗೆ ಚಿಂತನೆ ನಡೆಸಲಾಗಿತ್ತು.
ರಾಣಿ ಅಬ್ಬಕ್ಕ ಪಡೆಯಲ್ಲಿರುವ ಮಫ್ತಿ ಮಹಿಳಾ ಪೊಲೀಸರು ಶಾಲಾ-ಕಾಲೇಜು, ಜನದಟ್ಟಣೆ ಪ್ರದೇಶಗಳು, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಗಸ್ತು ತಿರುಗಲಿದ್ದಾರೆ. ಮಹಿಳೆಯರನ್ನು ಚುಡಾಯಿಸುವ, ಕೀಟಲೆ ಮಾಡುವ, ಅಶ್ಲೀಲ ಕಮೆಂಟ್, ಅಸಭ್ಯ ವರ್ತನೆ ಮಾಡುವವರನ್ನು ಹಿಡಿದು ಕ್ರಮ ಕೈಗೊಳ್ಳಲಿದ್ದಾರೆ. ವಾಹನದಲ್ಲಿ ಪಿಎಸ್ಸೈ ಸಹಿತ ಮೂವರು ಸಿಬ್ಬಂದಿ ಇರಲಿದ್ದು, ಇದರಲ್ಲಿ ಓರ್ವ ಪುರುಷ ಸಿಬ್ಬಂದಿಯೂ ಇರಲಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಮುಂದಾಗಿರುವ ಪೊಲೀಸ್ ಇಲಾಖೆಯು ನಗರದ ಸಿಟಿ ಸೆಂಟರ್ ಅವರಣದಲ್ಲಿ ಏ.30 ರ ಮಂಗಳವಾರ ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಇದಕ್ಕೆ ಚಾಲನೆ ನೀಡಿದರು..
