ಮಾಜಿ ಪ್ರೇಮಿಯ ಕೊಂದು , ದೇಹದ ಭಾಗಗಳನ್ನು ಕತ್ತರಿಸಿ ಅಡುಗೆ ಮಾಡಿ ಬಡಿಸಿದ ಮಹಿಳೆ..
ಅಬುಧಾಬಿ: ಮಹಿಳೆಯೊಬ್ಬಳು ತನ್ನ ಮಾಜಿ ಪ್ರೇಮಿಯನ್ನು ಕೊಂದು, ದೇಹದ ಭಾಗಗಳನ್ನು ಕತ್ತರಿಸಿ ಅಡುಗೆ ಮಾಡಿ ಕಟ್ಟಡ ಕಾರ್ಮಿಕರಿಗೆ ಬಡಿಸಿದ ಘಟನೆಯು ಇಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಆಫ್ರಿಕಾದ ಮೊರಾಕ್ಕೊ ಮಹಿಳೆ ಈ ಬರ್ಬರ ಕೃತ್ಯವೆಸಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
‘ಮಹಿಳೆಯ ಪ್ರೇಮಿಯು ದಕ್ಷಿಣ ಆಫ್ರಿಕಾದ ಮೊರಕ್ಕೊದ ಮತ್ತೊಬ್ಬ ಯುವತಿಯನ್ನು ಮದುವೆಯಾಗಲು ಯೋಚಿಸಿದ್ದನು. ಇದರಿಂದ ಸಿಟ್ಟಿಗೆದ್ದ ಮೊರಕ್ಕೊದ ಮಹಿಳೆ ಆತನನ್ನು ಮನೆಗೆ ಕರೆಸಿ, ಹತ್ಯೆ ಮಾಡಿ, ಮಾಂಸದಿಂದ ಬಿರಿಯಾನಿ ಮಾಡಿ ತನ್ನ ಮನೆ ಪಕ್ಕದ ಶೆಡ್ ನಲ್ಲಿದ್ದ ಕೂಲಿ ಕಾರ್ಮಿಕರಿಗೆ ಬಡಿಸಿದ್ದಾಳೆ. ನಂತರ ದೇಹದ ಉಳಿದ ಅವಶೇಷಗಳನ್ನು ಪಕ್ಕದ ಮನೆಯ ನಾಯಿಗಳಿಗೆ ಹಾಕಿದ್ದಾಳೆ ’..
ಮೃತನ ಸಹೋದರ ಇವರಿಬ್ಬರು ತಂಗಿದ್ದ ಮನೆಯಲ್ಲಿ ಹುಡುಕಾಟ ಆರಂಭಿಸಿದ್ದಾನೆ. ಆಗ ರುಬ್ಬುವ ಯಂತ್ರದಲ್ಲಿ ಆತನ ಹಲ್ಲುಗಳು ಇರುವುದನ್ನು ಗುರುತಿಸಿದ್ದಾನೆ. ಆಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇದರ ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಮೊರಾಕ್ಕೊದ ಮಹಿಳೆ ಕೂಡ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಖಾಜಿಲ್ ಟೈಮ್ಸ್ ವರದಿ ಮಾಡಿದೆ.
