ಮಾಜಿ ಶಾಸಕ ಅನಿಲ್ ಲಾಡ್ ಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಜೀವ ಬೆದರಿಕೆ
ಬೆಂಗಳೂರು: ಮಾಜಿ ಶಾಸಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯರು ಆಗಿರುವ ಕಾಂಗ್ರೆಸ್ ನಾಯಕ ಅನಿಲ್ ಲಾಡ್ ಅವರಿಗೆ ಗುಂಡಿಕ್ಕಿ ಕೊಲ್ಲುವುದಾಗಿ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಬೆದರಿಕೆ ಸಂದೇಶ ಬಂದಿದೆ.
ಡಿ. 5 ರಂದು ಅನಿಲ್ ಲಾಡ್ ಅವರಿಗೆ ಮೊಬೈಲ್ ಮೂಲಕ ಮೆಸೇಜ್ ಮಾಡಿರುವ ಪಾತಕಿ, ಹಣಕಾಸು ಸಂಬಂಧ ಬೆದರಿಕೆ ಹಾಕಿದ್ದಾನೆ. ಅನಿಲ್ ಲಾಡ್ ವ್ಯವಹಾರಿಕ ಸಂಬಂಧದ ಹಿನ್ನೆಲೆಯಲ್ಲಿ ನಗರದ ಶಿವಕುಮಾರ್ ಎಂಬುವರ ವಿರುದ್ಧ ದೂರು ದಾಖಲಿಸಿದ್ದರು.
ರವಿ ಪೂಜಾರಿ ಹೆಸರಿನಲ್ಲಿ ಅಂತರಾಷ್ಟ್ರೀಯ ನಂಬರ್‍ನಿಂದ ಬಂದಿರುವ ಮೆಸೇಜ್‍ನಲ್ಲಿ ಶಿವಕುಮಾರ್ ನೀಡಬೇಕಿದ್ದ ಹಣ ಮರೆತು ಬಿಡಿ. ಇಲ್ಲವಾದರೆ ನಿನ್ನನ್ನು ಗುಂಡಿಕ್ಕಿ ಕೊಲ್ಲುತ್ತೇನೆ ಎಂದು ರವಿ ಪೂಜಾರಿ ಬೆದರಿಕೆ ಹಾಕಿದ್ದಾನೆ. ಸದ್ಯ ಅನಿಲ್ ಲಾಡ್ ಗೃಹ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಪ್ರಕರಣದ ಕುರಿತು ತನಿಖೆಯನ್ನು ಮಾಡುವಂತೆ ಮನವಿ ಮಾಡಿದ್ದಾರೆ.ಗೃಹ ಸಚಿವರು ಪೊಲೀಸ್ ಇಲಾಖೆಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ..

