ಬೆಂಗಳೂರು: ತನ್ನ ವಿರುದ್ಧ ಜನಪದ ಹಾಡು ತಿರುಚಿದ ಆರೋಪ ಕೇಳಿ ಬರುತ್ತಿದ್ದಂತೆಯೇ ಕನ್ನಡ ರ‍್ಯಾಪರ್, ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ.
ಈ ಸಂಬಂಧ ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟ ಚಂದನ್, ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡಲು ಈ ಹಾಡನ್ನು ಮಾಡಿಲ್ಲ. ಈಗಿನ ಪೀಳಿಗೆಗೆ ನಮ್ಮ ಜಾನಪದ ತಲುಪಲಿ ಅನ್ನೋ ಕಾರಣಕ್ಕೆ ರ್ಯಾಪ್ ಹಾಡಿನ ರೂಪ ಕೊಟ್ಟಿದ್ದೆ. ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
Ramping ಹಾಡುಗಳ ಮೂಲಕ ಪ್ರಸಿದ್ಧಿಯಾಗಿರುವಂತ ಚೆಂದನ್ ಶೆಟ್ಟಿ ಇತ್ತೀಚೆಗೆ ಕೋಲುಮಂಡೆ ಎನ್ನುವಂತ ವೀಡಿಯೋ ಆಲ್ಬಂ ಹೊರ ತಂದಿದ್ದರು. ಈ ವೀಡಿಯೋ ಆಲ್ಪಂ ನಲ್ಲಿ ಶರಣೆ ಸಂಕಮ್ಮ, ಮಾದಪ್ಪನ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆಯಂತೆ. ಸಂಕಮ್ಮ, ಮಾದಪ್ಪನನ್ನು ಕೆಟ್ಟದಾಗಿ ಚಿತ್ರೀಕರಣ ಮಾಡಿರುವುದೇ ಮಲೆ ಮಹದೇಶ್ವರ ಭಕ್ತರ ಆಕ್ರೋಶಕ್ಕೆ ಕಾರಣವಾಗಿರೋದು.
ಮಲೆ ಮಹದೇಶ್ವರನ ಭಕ್ತರು ಈ ಸಂಬಂಧ ಕಿಡಿಕಾರಿದ್ದು, ಸಂಕಮ್ಮ, ಮಾದಪ್ಪನನ್ನ ಕೆಟ್ಟದಾಗಿ ಚಿತ್ರೀಕರಣ ಮಾಡಲಾಗಿದೆ. ಜಾನಪದ ಹಾಡಿಗೆ Ramp ಸಾಂಗ್ ಟಚ್ ಕೊಡಲಾಗಿದೆ. ಸಂಕಮ್ಮನನ್ನು ಕೆಟ್ಟದಾಗಿ ತೋರಿಸಿದ್ದಾರೆ. ಚೆಂದನ್ ಶೆಟ್ಟಿ ತಂಡ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಈ ಮೂಲಕ ಇದೀಗ ಚೆಂದನ್ ಶೆಟ್ಟಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದರು.
ಇಂತಹ ವೀಡಿಯೋ ಆಲ್ಪಂ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವಂತ ಚೆಂದನ್ ಶೆಟ್ಟಿಯವರು ಕೆಟ್ಟದಾಗಿ ಚಿತ್ರೀಕರಿಸಿರುವಂತೆ ಶರಣೆ ಸಂಕಮ್ಮನ ವೀಡಿಯೋ ದೃಶ್ಯಾವಳಿಯನ್ನು ತೆಗೆದು ಹಾಕುತ್ತೇವೆ. ನಾನು ಚಾಮರಾಜನಗರ, ಮೈಸೂರು ಸೇರಿದಂತೆ ಸಂಕಮ್ಮ, ಮಲೆಮಹದೇಶ್ವರ ಭಕ್ತರನ್ನು ಕ್ಷಮೆ ಯಾಚಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…