ಕಾಪು, : ಉದ್ಯಾವರದ ಬೊಳ್ಜೆ ಪಾಪನಾಶಿನಿ ಹೊಳೆಯ ರೈಲ್ವೆ ಸೇತುವೆ ಬಳಿ ಮಲ್ಲಾರಿನ ವ್ಯಕ್ತಿಯೊಬ್ಬರ ಸಂಶಯಾಸ್ಪದವಾಗಿ ಮೃತಪಟ್ಟ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಲಾರು ಗ್ರಾಮದ ಕನ್ನಡ ಶಾಲೆ ಹತ್ತಿರ ನಿವಾಸಿ ಉಬೇದುಲ್ಲಾ ಯಾನೆ ಮೊಹಮ್ಮದ್ ಖಾಸಿಂ(59) ಎಂಬವರ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ ಮೃತರ ಪುತ್ರಿ ತನಿಖೆಗೆ ಆಗ್ರಹಿಸಿ ಠಾಣೆಗೆ ದೂರು ನೀಡಿದ್ದಾರೆ.
ಗ್ಯಾರೇಜ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಉಬೇದುಲ್ಲಾ, ಆ.23ರಂದು ಮನೆಯಿಂದ ಬೈಕಿನಲ್ಲಿ ಉಡುಪಿಗೆ ತೆರಳಿದ್ದರು. ಸಂಜೆ 7:30ರ ಸುಮಾರಿಗೆ ಮಗಳು ಕರೆ ಮಾಡಿದಾಗ ಮನೆಗೆ ಈಗ ಬರುವುದಾಗಿ ಹೇಳಿದ್ದರು. ಬಳಿಕ ರಾತ್ರಿ 8 ಗಂಟೆಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು.
ಆ.24ರಂದು ಬೆಳಿಗ್ಗೆ ಅವರ ಮೃತದೇಹವು ಉದ್ಯಾವರದ ಬೊಳ್ಜೆ ಪಾಪನಾಶಿನಿ ಹೊಳೆಯ ರೈಲ್ವೆ ಸೇತುವೆ ಬಳಿ ಪತ್ತೆಯಾಗಿದ್ದು, ಮೃತದೇಹದ ಬಲಬದಿ ಹಣೆಯ ಸಮೀಪ ತರಚಿದ ಗಾಯ ಕಂಡುಬಂದಿದೆ ಎಂದು ದೂರಲಾಗಿದೆ. ಇವರು ಆ.23ರಂದು ರಾತ್ರಿ ವೇಳೆ ಮೃತಪಟ್ಟಿರುವ ಸಾಧ್ಯತೆ ಇದ್ದು ಮೃತರ ಸಾವಿನಲ್ಲಿ ಸಂಶಯವಿರುವುದಾಗಿ ಮಗಳು ಆಫ್ರೀನ್ ಬಾನು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…