ಮಾರ್ಚ್‌ 23ರಿಂದ ಐಪಿಎಲ್ ಆರಂಭ : ಈ ಬಾರಿಯ ಐಪಿಎಲ್ ಪಂದ್ಯ ಭಾರತದಲ್ಲಿ..

Featured, ರಾಷ್ಟ್ರ ನ್ಯೂಸ್
ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 2019ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿ ದುಬೈನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ 12ನೇ ಆವೃತ್ತಿಯ ಐಪಿಎಲ್ ಪಂದ್ಯ ಭಾರತದಲ್ಲಿ ನಡೆಯಲಿದೆ.
ಇಂದು ನಡೆದ ಸುಪ್ರೀಂ ಕೋರ್ಟ್ ನೇಮಿಸಿರುವ ಬಿಸಿಸಿಐ ನಿರ್ವಾಹಕ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಮಾರ್ಚ್ 23ರಿಂದ ಭಾರತದಲ್ಲೇ ಪಂದ್ಯಾವಳಿ ನಡೆಯಲಿದೆ.
ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತ ಸಮಿತಿ ಮಂಗಳವಾರ ನವದೆಹಲಿಯಲ್ಲಿ ಈ ಬಾರಿ ಐಪಿಎಲ್ ಪಂದ್ಯಾಟವನ್ನು ಎಲ್ಲಿ ನಡೆಸಬೇಕು ಎನ್ನುವುದರ ಬಗ್ಗೆ ಸಭೆ ನಡೆಸಿತು. ಅಂತಿಮವಾಗಿ ಭಾರತದಲ್ಲೇ ಟೂರ್ನಿ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
 2019ರ ಐಪಿಎಲ್ ಸ್ವದೇಶದಲ್ಲೇ ನಡೆಯಲಿದ್ದು ವೇಳಾಪಟ್ಟಿ ಕುರಿತಂತೆ ಮುಂದಿನ ದಿನಗಳಲ್ಲಿ ಬಿಸಿಸಿಐ ಬಿಡುಗಡೆ ಮಾಡಲಿದೆ