ಮಾರ್ಚ್23-24 ರಂದು ಸುಗ್ಗಿ ಮಾರಿಪೂಜೆ ಹಿನ್ನಲೆ -ಕಾಪು-ಮಜೂರು-ಮೂಳೂರು -ಪಡು ಎಲ್ಲಾ ಬಾರ್ ವೈನ್ ಶಾಪ್ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ.
ಕಾಪು: ಕಾಪು ತಾಲೂಕಿನ ಕಾಪುವಿನ ಮೂರು ಮಾರಿಗುಡಿಗಳಲ್ಲಿ ದಿನಾಂಕ 23/03/2021 ಮತ್ತು ದಿನಾಂಕ 24/03/2021 ರಂದು ಸುಗ್ಗಿ ಮಾರಿ ಪೂಜೆಯು ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭೇಟಿ ನೀಡಲಿದ್ದು ಸದ್ರಿ ಮೂರು ಮಾರಿ ಗುಡಿಗಳು ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಇರುವುದರಿಂದ ಮಾರಿ ಪೂಜೆಗೆ ಬರುವವರ ಪೈಕಿ ಕೆಲವರು ಮಧ್ಯ ಸೇವಿಸಿ, ಅಮಲಿನಲ್ಲಿ ರಸ್ತೆ ದಾಟುವ ಬಗ್ಗೆ ಹಾಗೂ ರಾತ್ರಿ ವೇಳೆಗೆ ದೇವಸ್ಥಾನಕ್ಕೆ ಬರುವ ಜನರೊಂದಿಗೆ ಮದ್ಯ ಸೇವಿಸಿದವರು ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವ ಸಾಧ್ಯತೆ ಇದ್ದು, ಅಲ್ಲದೇ ರಸ್ತೆ ಅಪಘಾತಗಳು ನಡೆಯುವ ಸಾಧ್ಯತೆಯೂ ಇರುತ್ತದೆ. ಇದರಿಂದ ಕಾನೂನು ಸುವ್ಯಸ್ಥೆಗೆ ಧಕ್ಕೆಯಾಗುವ ಸಂಭವ ಇರುವುದಾಗಿದೆ. ಆದುದರಿಂದ ದಿನಾಂಕ: 23/03/2021 ಬೆಳಿಗ್ಗೆ 06:00 ಗಂಟೆಯಿಂದ ದಿನಾಂಕ 24/03/2021 ರ ರಾತ್ರಿ 12:00 ಗಂಟೆಯವರಗೆ ಸದ್ರಿ ಕಾಪು ಠಾಣಾ ವ್ಯಾಪ್ತಿಯ ಕಾಪು ಪಡು, ಮೂಳೂರು, ಮಜೂರು ಗ್ರಾಮದಲ್ಲಿರುವ ಬಾರ್ & ರೆಸ್ಟೋರೆಂಟ್, ವೈನ್ ಶಾಪಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಇವರು ಪತ್ರದಲ್ಲಿ ಕೋರಿರುತ್ತಾರೆ,
ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಇವರು ನೀಡಿರುವ ವರದಿಯಂತೆ ದಿನಾಂಕ:23/03/2021 ಮತ್ತು ದಿನಾಂಕ:24/03/2021 ರಂದು ಕಾಪು ತಾಲೂಕಿನ ಕಾಪುವಿನ ಮಾರಿ ಗುಡಿಗಳಲ್ಲಿ ನುಗ್ಗಿ ಮಾರಿ ಪೂಜೆಯು ನಡೆಯುವ ಸಂದರ್ಭದಲ್ಲಿ ಬಾರ್ ಮತ್ತು ವ್ಯನ್‌ಶಾಪ್‌ಗಳು ತರದಿದ್ದಲ್ಲಿ, ಮದ್ಯಪಾನಾಸಕ್ತರು ಮದ್ಯಪಾನಮಾಡಿ ಗಲಭೆಮಾಡುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಜಿ ಜಗದೀಶ ಭಾ.ಆ.ಸೇ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಉಡುಪಿ ಜಿಲ್ಲೆ ಆದ ನಾನು ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶ ಮದ್ಯ ಮಾರಾಟ) ನಿಯಮಗಳು 1968 ರ ನಿಯಮ 3 ರಡಿ ನೀಡಿರುವ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಂಗಡಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ 1961 ಕಲಂ 21ರನ್ವಯ ಅಧಿಕಾರವನ್ನು ಚಲಾಯಿಸಿ ಕಾಪು ಠಾಣಾ ವ್ಯಾಪ್ತಿಯ ಕಾಪು ಪಡು, ಮೂಳೂರು, ಮಜೂರು ಗ್ರಾಮಗಳ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ ಶಾಪ್‌ಗಳ ಮದ್ಯ ಮಾರಾಟವನ್ನು ದಿನಾಂಕ:23/03/2021 ರ ಬೆಳಿಗ್ಗೆ 6.00 ಗಂಟೆಯಿಂದ ದಿನಾಂಕ:24/03/2021 ರಂದು ರಾತ್ರಿ 12.00 ಗಂಟೆಯವರೆಗೆ ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿದೆ. ಈ ಹಿನ್ನಲೆಯಲ್ಲಿ ಮೇಲೆ ತಿಳಿಸಲಾದ ದಿನಾಂಕದಂದು ಕಾಪು ಠಾಣಾ ವ್ಯಾಪ್ತಿಯ ಕಾಪು ಪಡು, ಮೂಳೂರು, ಮಜೂರು ಗ್ರಾಮಗಳ ವ್ಯಾಪ್ತಿಯಲ್ಲಿ ಒಣದಿನ (Dry Day) ಎಂದು ಘೋಷಿಸಿ, ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಎಂದು ಪ್ರಕಟನೆ ತಿಳಿಸಿದೆ.
ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’ ವಿನಯ್ ಕುಮಾರ್ ಸೊರಕೆ ಮಾರ್ಗದರ್ಶನದಲ್ಲಿ…
ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…
ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್ಟ್ರಿಮ್ ಡ್ಯಾನ್ಸ್ ಅಕಾಡೆಮಿ…
ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…
ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು: ದಸರಾ…
`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…