ಮಿಂಚಿನ ಕಂಬಳ ಓಟಗಾರ ಶ್ರೀನಿವಾಸ್ ಗೌಡ ಅವರಿಗೆ ಮುಖ್ಯಮಂತ್ರಿಯಿಂದ ಸನ್ಮಾನ -Vishwanews24
ಬೆಂಗಳೂರು: ಕಂಬಳದಲ್ಲಿ ವೇಗವಾಗಿ ಓಡುವ ಮೂಲಕ ಜನಮನ್ನಣೆಗೆ ಪಾತ್ರವಾಗಿರುವ ಶ್ರೀನಿವಾಸ್ ಗೌಡ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸನ್ಮಾನ ಮಾಡಿದ್ದಾರೆ. ಈ ಸಂದರ್ಭ ಸಿ.ಟಿ. ರವಿ ಉಪಸ್ಥಿತರಿದ್ದರು.
ಸೋಮವಾರ ಶ್ರೀನಿವಾಸ್ ಗೌಡ ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಅವರೊಂದಿಗೆ ವಾರ್ತಾ ಇಲಾಖೆಯ ಅರುಣಕಾಂತ, ವರದಿಗಾರ ನಾಗರಾಜ, ಕೆ.ಗೋಪಾಲನ್ ಕಡಬ, ಹರ್ಷವರ್ಧನ್ ಪಡಿವಾಳ, ಶಕ್ತಿ ಪ್ರಸಾಸ್ ಶೆಟ್ಟಿ, ರಶ್ಮಿತ್ ಶೆಟ್ಟಿ, ಪ್ರದೀಪ್ ಚಂದ್ರ ಜೈನ್, ಸಚಿನ್ ಅಡಪ, ರಾಜೇಶ್ ಮಾರ್ನಾಡ್, ಯತೀಶ್ ಶೆಟ್ಟಿ, ದಿನೇಶ್ ಕೋಟ್ಯಾನ್, ಮನ್ಮಥ ಕೆಲ್ಲ, ಬಿ.ಸಿ. ರಮೇಶ್, ರಕ್ಷಿತ್ ಜೈನ್, ಜಿವಿತೇಶ್ ಕಡಂಬ ಇದ್ದರು.
