ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ : ಕಿರೀಟ ಗೆದ್ದ ಮಂಗಳೂರಿನ ಈಶಿಕಾ ಶೆಟ್ಟಿ – Vishwanews24
ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ : ಕಿರೀಟ ಗೆದ್ದ ಮಂಗಳೂರಿನ ಈಶಿಕಾ ಶೆಟ್ಟಿ
ಮಂಗಳೂರು: ಮಂಗಳೂರಿನ ಈಶಿಕಾ ಶೆಟ್ಟಿ “ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ 2024” ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಈ ಸ್ಪರ್ಧೆ ಹೊಸದಿಲ್ಲಿಯಲ್ಲಿ ನಡೆದಿದೆ.
ದೇಶದ ಒಟ್ಟು 65 ಮಂದಿ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಕರ್ನಾಟಕದಿಂದ ಆಯ್ಕೆಯಾಗಿದ್ದ ಏಕೈಕ ಸ್ಪರ್ಧಿ ಈಶಿಕಾ. ಈಕೆ 2023 ರಲ್ಲಿ “ಮಿಸ್ ಟೀನ್ ಮಂಗಳೂರು” ಆಗಿ, 2023 ರಲ್ಲಿ “ಮಿಸ್ ಟೀನ್ ಕರ್ನಾಟಕ” ಆಗಿ ಆಯ್ಕೆಯಾಗಿದ್ದರು.

ಸಣ್ಣಂದಿನಿಂದಲೇ ನಾಟಕದಲ್ಲಿ ಅಭಿನಯ ಮತ್ತು ಮಾಡೆಲಿಂಗ್ ನಲ್ಲಿ ತುಂಬಾ ಆಸಕ್ತಿ ಇತ್ತು. ಈಗ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಬಂದಿರುವುದು ತುಂಬಾ ಖುಷಿಕೊಟ್ಟಿದೆ ಎಂದಿದ್ದಾರೆ ಈಶಿಕಾ. ಕಾವೂರು ನಿವಾಸಿಯಾಗಿರುವ ಈಕೆ ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿನಿ.
