ಮುಂಬಯಿ: ಬೆಂಗಳೂರು-ಮುಂಬಯಿ ವಂದೇ ಭಾರತ್ ಪರ್ ರೈಲಿಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ನ. 1ರಂದು ಚಾಲನೆ ನೀಡಿದ್ದರು. ಇದು ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ರೈಲು ಪ್ರಯಾಣಿಕರ ಸಮಯವನ್ನು ಗಣನೀಯವಾಗಿ ಉಳಿಸುತ್ತದೆ. ಆದರೆ, ಟಿಕೆಟ್ ದರ ಮಾತ್ರ ಇತರ ರೈಲುಗಳಿಗಿಂತ ಸಾಕಷ್ಟು ದುಬಾರಿಯಾಗಿದೆ.
ಈ ಮಾರ್ಗದಲ್ಲಿ ಸಂಚರಿಸುವ ಇತರ ರೈಲುಗಳಿಗಿಂತ ವಂದೇ ಭಾರತ್ ಸ್ಲಿಪರ್‌ನ “ಎಸಿ 3 ಟೈರ್’ ದರವು ಶೇ. 60 ರಿಂದ 96ರಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ವಂದೇ ಭಾರತ್ ಸ್ಲೀಪರ್ ಟಿಕೆಟ್ ದರ ಎಸಿ 3 ಟೈರ್‌ಗೆ 2,810 ರೂ., ಎಸಿ 2 ಟೈರ್‌ಗೆ 3,630 ರೂ. ಹಾಗೂ ಎಸಿ 1 ಟೈರ್‌ಗೆ 4,450 ರೂ. ನಿಗದಿಪಡಿಸಲಾಗಿದೆ. ಇದೇ ಮಾರ್ಗದ ಮತ್ತೂಂದು ರೈಲಾದ ಕೊಯಮತ್ತೂರು- ಮುಂಬಯಿ ಎಲ್‌ಟಿಟಿ ಎಕ್ಸ್‌ಪ್ರೆಸ್‌ನ ಎಸಿ 3 ದರ ಕೇವಲ 1,435 ರೂ. ಇದೆ (ಎಸಿ 2: 2,045 ರೂ., ಎಸಿ 1: 3,425 ರೂ.). ಅಜಿರ್‌ಎಕ್ಸ್‌ಪ್ರೆಸ್ ರೈಲಿನ ಎಸಿ 3 ದರ 1,510 ರೂ. ಇದೆ. ಇನ್ನು ಪ್ರೀಮಿಯಂ ರೈಲಾದ “ಹಮ್‌ಸಫರ್ ಎಕ್ಸ್‌ಪ್ರೆಸ್’ಗೆ ಹೋಲಿಸಿದರೂ ವಂದೇ ಭಾರತ್ ಎಸಿ 3 ಟಿಕೆಟ್ ದರ ಶೇ.63 ರಷ್ಟು ಹೆಚ್ಚಿದೆ (ಹಮ್‌ಸಫರ್‌ಸಿ 3 ದರ: 1,725 ರೂ.) ಎಂದು ತಿಳಿದುಬಂದಿದೆ.
ಯಾವ ನಿಲ್ದಾಣಗಳಲ್ಲಿ ನಿಲ್ಲುತ್ತದೆ?
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ.. ಜಿಲ್ಲಾ, ತಾಲ್ಲೂಕು ಮಟ್ಟದಲ್ಲೂ ಹೋರಾಟ ನಡೆಸಲು ನಿರ್ಧಾರ ಬೆಂಗಳೂರು: ಎಸ್ಐಆರ್…
ಬೆಂಗಳೂರು: ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಸರ್ಕಾರ; ನಂದಿನಿ ಮೊಸರಿನ ದರ ಇಳಿಕೆಗೆ ಸಿಎಂ. ಸೂಚನೆ ಬೆಂಗಳೂರು: ನಂದಿನಿ ಹಾಲು ಮತ್ತು…
ವಾಟ್ಸಾಪ್ ಬಳಕೆದಾರರೇ ಎಚ್ಚರ: ದೀಪಾವಳಿ ಆಫರ್‌ಗಳ ಆಮಿಷಕ್ಕೆ ಬೀಳಬೇಡಿ; ನಕಲಿ ಸಂದೇಶಗಳ ಮೂಲಕ ಸೈಬರ್ ವಂಚಕರ ಜಾಲ ಸಕ್ರಿಯ ದೀಪಾವಳಿ…
ಮುರಸು ಚಂಡಮಾರುತ ಪರಿಣಾಮ : ರಾಜ್ಯದಲ್ಲಿ ಮುಂದಿನ 3 ದಿನ ವ್ಯಾಪಕ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಎಚ್ಚರಿಕೆ…
ಉಡುಪಿ: ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಲು ಬಿಲ್ಲವ ಯುವ ವೇದಿಕೆ ಆಗ್ರಹ…
ಕುಂದಾಪುರ: ಟಿಪ್ಪರ್-ಸ್ಕೂಟರ್ ಅಪಘಾತ; ಗಂಭೀರ ಗಾಯಗೊಂಡಿದ್ದ ಕಾಲೇಜು ವಿದ್ಯಾರ್ಥಿ ಸಾವು ಕುಂದಾಪುರ: ಅಕ್ಟೋಬರ್ 30 ರಂದು ಬಳ್ಕೂರಿನಲ್ಲಿ ನಡೆದ ಟಿಪ್ಪರ್…