ಮುಂಬಯಿ-ಬೆಂಗಳೂರು ವಂದೇ ಭಾರತ್‌ : ಟಿಕೆಟ್‌ ದರ ಪ್ರಕಟ ; ಎಲ್ಲೆಲ್ಲಿ ನಿಲ್ದಾಣ? vishwanews24

Featured, ದಕ್ಷಿಣ ಕನ್ನಡ, ರಾಷ್ಟ್ರ ನ್ಯೂಸ್

ಮುಂಬಯಿ-ಬೆಂಗಳೂರು ವಂದೇ ಭಾರತ್‌ : ಟಿಕೆಟ್‌ ದರ ಪ್ರಕಟ ; ಎಲ್ಲೆಲ್ಲಿ ನಿಲ್ದಾಣ?

ಮುಂಬಯಿ: ಬೆಂಗಳೂರು-ಮುಂಬಯಿ ವಂದೇ ಭಾರತ್ ಪರ್ ರೈಲಿಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ನ. 1ರಂದು ಚಾಲನೆ ನೀಡಿದ್ದರು. ಇದು ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ರೈಲು ಪ್ರಯಾಣಿಕರ ಸಮಯವನ್ನು ಗಣನೀಯವಾಗಿ ಉಳಿಸುತ್ತದೆ. ಆದರೆ, ಟಿಕೆಟ್ ದರ ಮಾತ್ರ ಇತರ ರೈಲುಗಳಿಗಿಂತ ಸಾಕಷ್ಟು ದುಬಾರಿಯಾಗಿದೆ.

ಈ ಮಾರ್ಗದಲ್ಲಿ ಸಂಚರಿಸುವ ಇತರ ರೈಲುಗಳಿಗಿಂತ ವಂದೇ ಭಾರತ್ ಸ್ಲಿಪರ್‌ನ “ಎಸಿ 3 ಟೈರ್’ ದರವು ಶೇ. 60 ರಿಂದ 96ರಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ವಂದೇ ಭಾರತ್ ಸ್ಲೀಪರ್ ಟಿಕೆಟ್ ದರ ಎಸಿ 3 ಟೈರ್‌ಗೆ 2,810 ರೂ., ಎಸಿ 2 ಟೈರ್‌ಗೆ 3,630 ರೂ. ಹಾಗೂ ಎಸಿ 1 ಟೈರ್‌ಗೆ 4,450 ರೂ. ನಿಗದಿಪಡಿಸಲಾಗಿದೆ. ಇದೇ ಮಾರ್ಗದ ಮತ್ತೂಂದು ರೈಲಾದ ಕೊಯಮತ್ತೂರು- ಮುಂಬಯಿ ಎಲ್‌ಟಿಟಿ ಎಕ್ಸ್‌ಪ್ರೆಸ್‌ನ ಎಸಿ 3 ದರ ಕೇವಲ 1,435 ರೂ. ಇದೆ (ಎಸಿ 2: 2,045 ರೂ., ಎಸಿ 1: 3,425 ರೂ.). ಅಜಿರ್‌ಎಕ್ಸ್‌ಪ್ರೆಸ್ ರೈಲಿನ ಎಸಿ 3 ದರ 1,510 ರೂ. ಇದೆ. ಇನ್ನು ಪ್ರೀಮಿಯಂ ರೈಲಾದ “ಹಮ್‌ಸಫರ್ ಎಕ್ಸ್‌ಪ್ರೆಸ್’ಗೆ ಹೋಲಿಸಿದರೂ ವಂದೇ ಭಾರತ್ ಎಸಿ 3 ಟಿಕೆಟ್ ದರ ಶೇ.63 ರಷ್ಟು ಹೆಚ್ಚಿದೆ (ಹಮ್‌ಸಫರ್‌ಸಿ 3 ದರ: 1,725 ರೂ.) ಎಂದು ತಿಳಿದುಬಂದಿದೆ.

ಮುರಸು ಚಂಡಮಾರುತದ ಪ್ರಭಾವ  : ರಾಜ್ಯದಲ್ಲಿ ಮುಂದಿನ 3 ದಿನ ವ್ಯಾಪಕ ಮಳೆಯ ಎಚ್ಚರಿಕೆ – vishwanews24

ಯಾವ ನಿಲ್ದಾಣಗಳಲ್ಲಿ ನಿಲ್ಲುತ್ತದೆ?

ಈ ರೈಲು ಪ್ರಮುಖ ನಗರಗಳಲ್ಲಿ ನಿಲ್ಲುತ್ತದೆ.
ಅನಂತಪುರ , ಗುಂತಕಲ್, ರಾಯಚೂರು , ಯಾದಗಿರಿ , ಕಲಬುರಗಿ ,ಸೋಲಾಪುರ, ಪುಣೆ ಕಲ್ಯಾಣ್
ವಿಶೇಷವಾಗಿ ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ನಿಲುಗಡೆಗಳು ತುಂಬಾ ಅನುಕೂಲವಾಗಲಿವೆ. ಮಹಾರಾಷ್ಟ್ರದ ಸೋಲಾಪುರ, ಪುಣೆ ಮತ್ತು ಕಲ್ಯಾಣ್ ಮೂಲಕವೂ ರೈಲು ಸಾಗುತ್ತದೆ.

Leave a Reply