ಮುಂಬೈ : ನಾಲ್ಕು ಅಂತಸ್ತಿನ ಕಟ್ಟಡ ಕುಸಿತ : ಅವಶೇಷಗಳ ಅಡಿಯಲ್ಲಿ 40 ಕ್ಕೂ ಹೆಚ್ಚು ಜನ ಸಿಲುಕಿರುವ ಸಾಧ್ಯತೆ -Vishwanews24

Featured, ರಾಷ್ಟ್ರ ನ್ಯೂಸ್

ಮುಂಬೈ: ಡೋಂಗ್ರಿಯಲ್ಲಿನ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು 12 ಜನರು ಮೃತಪಟ್ಟಿದ್ದು ಸುಮಾರು 40 ಕ್ಕೂ ಹೆಚ್ಚು ಜನರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ.

ಈ ಅವಘಡ ಇಂದು ಬೆಳಗ್ಗೆ 11.40 ಗಂಟೆಯಷ್ಟರಲ್ಲಿ ನಡೆದಿದ್ದು ಅಗ್ನಿಶಾಮಕ ದಳ ಕೂಡಲೇ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಈ ನಾಲ್ಕು ಅಂತಸ್ತಿನ ಕೇಸರ್​ಬಾಯ್​ ಕಟ್ಟಡ ಕುಸಿದು ತಂದೇಲ್​ ರಸ್ತೆಯ ಮೇಲೆ ಬಿದ್ದಿದ್ದಾಗಿ ಬೃಹನ್​​ ಮುಂಬೈ ಮುನ್ಸಿಪಲ್ ಕಾರ್ಪೊರೇಷನ (ಬಿಎಂಸಿ) ವಿಪತ್ತು ನಿರ್ವಹಣಾ ಘಟಕ ತಿಳಿಸಿದೆ.

ಇಲ್ಲಿ ಕಿರಿದಾದ ರಸ್ತೆಗಳ ಮೇಲೆ ಹಲವು ಶಿಥಿಲಗೊಂಡ ಕಟ್ಟಡಗಳು ಇವೆ. ಕಳೆದ ವಾರಗಳಲ್ಲಿ ಸುರಿದ ಮಳೆಯಿಂದಾಗಿ ಈ ಪ್ರದೇಶಗಳೆಲ್ಲ ಜಲಾವೃತಗೊಂಡಿತ್ತು.

ಸ್ಥಳಕ್ಕೆ ಆಂಬುಲೆನ್ಸ್​ಗಳು, ಟ್ರಕ್​ಗಳು ಬಂದಿವೆ. ಆದರೆ, ರಸ್ತೆಗಳು ತೀರ ಕಿರಿದಾಗಿರುವುದರಿಂದ ಕುಸಿದುಬಿದ್ದ ಕಟ್ಟಡದತ್ತ ತೆರಳಲು ಸಾಧ್ಯವಾಗುತ್ತಿಲ್ಲ. ಜೆಸಿಬಿಗಳು ಅಲ್ಲಿ ಹೋಗಲು ಸಾಧ್ಯವಿಲ್ಲ. ಕೆಳಗೆ ಕಟ್ಟಡದ ನಿವಾಸಿಗಳು ಸಿಲುಕಿರುವುದರಿಂದ ಎನ್​ಡಿಆರ್​ಎಫ್​ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೈಯಿಂದಲೇ ಮಣ್ಣು, ಸಿಮೆಂಟ್ ಬ್ಲಾಕ್​ಗಳನ್ನು ತೆರವುಗೊಳಿಸಬೇಕಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.