ಮುಂಬೈ: ಭಾರೀ ಮಳೆಯ ಪರಿಣಾಮ – ಲ್ಯಾಂಡಿಗ್ ವೇಳೆ ಜಾರಿದ ಏರ್ ಇಂಡಿಯಾ: ತಪ್ಪಿದ ಅನಾಹುತ – vishwanews24

Featured, ರಾಷ್ಟ್ರ ನ್ಯೂಸ್

ಮುಂಬೈ: ಭಾರೀ ಮಳೆಯ ಪರಿಣಾಮ – ಲ್ಯಾಂಡಿಗ್ ವೇಳೆ ಜಾರಿದ ಏರ್ ಇಂಡಿಯಾ: ತಪ್ಪಿದ ಅನಾಹುತ 

ಮುಂಬೈ: ಭಾರೀ ಮಳೆಯಿಂದಾಗಿ ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನವೊಂದು ರನ್ ವೇಯಲ್ಲೇ ಜಾರಿ ಅವಘಡ ಸಂಭವಿಸಿ ವಿಮಾನ ಎಂಜಿನ್ ಗೆ ಹಾನಿಯಾಗಿರುವ ಘಟನೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ಕೇರಳದ ಕೊಚ್ಚಿಯಿಂದ ಹೊರಟಿದ್ದ ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಭಾರೀ ಮಳೆಯ ಪರಿಣಾಮ ರನ್ ವೇಯಿಂದ ಜಾರಿದೆ. ಈ ಅವಘಡದಿಂದ ವಿಮಾನದ ಎಂಜಿನ್ ಗೆ ಹಾನಿಯಾಗಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರಿಗಾಗಲೀ, ಸಿಬ್ಬಂದಿಗಳಿಗಾಗಲೀ ಯಾವುದೇ ಹಾನಿಯಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಮುಡಾ ಪ್ರಕರಣ : ಪತ್ನಿ ವಿರುದ್ಧ ಅಪಪ್ರಚಾರ ಮಾಡಿದ ವಿಪಕ್ಷಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು: ಸಿಎಂ – vishwanews24

ಈ ಬಗ್ಗೆ ಪ್ರತಿಕ್ರಿಯಿಸಿರುವ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು, ಭಾರೀ ಮಳೆಯಿಂದಾಗಿ ಸಂಭವಿಸಿದ ಈ ಅವಘಡದಲ್ಲಿ ಕೇವಲ ವಿಮಾನ ಹಾಗೂ ರನ್‌ವೇಗೆ ಹಾನಿಯಾಗಿದೆಯೇ ಹೊರತು, ಪ್ರಯಾಣಿಕರಿಗಾಗಲೀ, ಸಿಬ್ಬಂದಿಗಳಿಗಾಗಲೀ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಿದ್ದಾರೆ.

Leave a Reply