ಮುಂಬೈ  : ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ : ಪೊಲೀಸರಿಂದ ಭದ್ರತೆ ಹೆಚ್ಚಳ – Vishwanews24

Featured, ರಾಷ್ಟ್ರ ನ್ಯೂಸ್

ಮುಂಬೈ  : ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ : ಪೊಲೀಸರಿಂದ ಭದ್ರತೆ ಹೆಚ್ಚಳ

ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಡಿಯನ್ ಮುಜಾಹಿದ್ದೀನ್ ಎಂಬ ಭಯೋತ್ಪಾದಕ ಸಂಘಟನೆ ಹೆಸರಿನಲ್ಲಿ ಬೆದರಿಕೆ ಹಾಕಿದ್ದು, ಪೊಲೀಸರಿಂದ ಭದ್ರತೆ ಹೆಚ್ಚಿಸಲಾಗಿದೆ.

ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದು, ವಿಮಾನ ನಿಲ್ದಾಣದ ಎಲ್ಲಾ ಏಜೆನ್ಸಿಗಳಿಗೂ ಎಚ್ಚರಿಕೆಯನ್ನು ಕಳುಹಿಸಲಾಗಿದೆ. ಮುಂಬೈನ ಸಹರ್ ಪೊಲೀಸರು ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 505(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇನ್ನು ತನಿಖಾ ಸಂಸ್ಥೆ ಎನ್‌ಐಎಗೆ ಬೆದರಿಕೆ ಮೇಲ್ ಕಳುಹಿಸಲಾಗಿದ್ದು, ಈ ಮೇಲ್ ಅನ್ನು ಎನ್‌ಐಎ ಇಮೇಲ್ ಐಡಿಯಲ್ಲಿ ಸ್ವೀಕರಿಸಲಾಗಿದೆ. ಇದರಲ್ಲಿ ಮುಂಬೈನಲ್ಲಿ ದಾಳಿಯ ಬೆದರಿಕೆ ಇತ್ತು ಎಂದು ವರದಿಯಾಗಿದೆ.

ಮಂಗಳೂರು: ವಿಷಾಹಾರ ಸೇವನೆ ಪ್ರಕರಣ : ನರ್ಸಿಂಗ್ ಕಾಲೇಜು ಮತ್ತು ಆಡಳಿತ ಮಂಡಳಿ ವಿರುದ್ದ ಎಫ್ ಐಆರ್ ದಾಖಲು – Vishwanews24

Leave a Reply