ಮುಕ್ಕ : ಬೀಚ್‌ನಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ – vishwanews24

Featured, ದಕ್ಷಿಣ ಕನ್ನಡ

ಮುಕ್ಕ : ಬೀಚ್‌ನಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

ಮಂಗಳೂರು: ಮುಕ್ಕಾದ ರೆಡ್‌ರಾಕ್ ಬೀಚ್‌ನಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವೇಳೆ ನೀರು ಪಾಲಾಗಿದ್ದ ಯುವಕ ಪ್ರಜ್ವಲ್ ಅವರ ಮೃತದೇಹ ಗುರುವಾರ ಸಸಿಹಿತ್ಲು ಸಮೀಪದ ಆಳ ಸಮುದ್ರದಲ್ಲಿ ಪತ್ತೆಯಾಗಿದೆ.

ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ಪ್ರಜ್ವಲ್ ಮೃತದೇಹ ತೇಲುತ್ತಿರುವುದನ್ನು ಗಮನಿಸಿ ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಮೀನುಗಾರರೊಂದಿಗೆ ಕರಾವಳಿ ಪೊಲೀಸರು ರಕ್ಷಣಾ ಬೋಟ್‌ನಲ್ಲಿ ಸ್ಥಳಕ್ಕೆ ತೆರಳಿ ಮೃತದೇಹವನ್ನು ದಡಕ್ಕೆ ತಂದಿದ್ದಾರೆ.

ಚಂಡಮಾರುತ ಹಾಗೂ ಆಗಾಗ ಸುರಿದ ಮಳೆಯಿಂದಾಗಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಇದರಿಂದ ಮುಕ್ಕದಲ್ಲಿ ಮುಳುಗಿ ಮೃತಪಟ್ಟ ಪ್ರಜ್ವಲ್ ಮೃತದೇಹವನ್ನು ಸಸಿಹಿತ್ಲು ಬಳಿ ಆಳ ಸಮುದ್ರಕ್ಕೆ ಕೊಂಡೊಯ್ಯಲಾಗಿದೆ ಎಂದು ಹೇಳಲಾಗಿದೆ.

ಕಾರ್ಕಳ : ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ- vishwanews24

Leave a Reply