ಮುಡಾ ಪ್ರಕರಣ : ಸಾಕ್ಷ್ಯಾಧಾರಗಳು ಇರದ್ದಕ್ಕೆ ಸಿದ್ದರಾಮಯ್ಯಗೆ ಲೋಕಾಯುಕ್ತದಿಂದ ಕ್ಲೀನ್ ಚಿಟ್ : ಗೃಹ ಸಚಿವ ಪರಮೇಶ್ವರ್ – vishwanews24

Featured, ರಾಜ್ಯ ನ್ಯೂಸ್

ಮುಡಾ ಪ್ರಕರಣ : ಸಾಕ್ಷ್ಯಾಧಾರಗಳು ಇರದ್ದಕ್ಕೆ ಸಿದ್ದರಾಮಯ್ಯಗೆ ಲೋಕಾಯುಕ್ತದಿಂದ ಕ್ಲೀನ್ ಚಿಟ್ : ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಮುಡಾ ಪ್ರಕರಣದಲ್ಲಿ  ಸಾಕ್ಷ್ಯಾಧಾರಗಳು ಇರದ್ದಕ್ಕೆ ಸಿದ್ದರಾಮಯ್ಯ ಅವರಿಗೆ  ಲೋಕಾಯುಕ್ತ  ಕ್ಲೀನ್ ಚಿಟ್ ಕೊಟ್ಟಿದೆ. ಲೋಕಾಯುಕ್ತ ತನಿಖೆಯನ್ನು ಬಿಜೆಪಿ ಪ್ರಶ್ನೆ ಮಾಡುವುದು ಸರಿನಾ ಎಂದು ಗೃಹ ಸಚಿವ ಪರಮೇಶ್ವರ್  ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.

ಮುಡಾ ಪ್ರಕರಣವನ್ನು ಸಿಬಿಐಗೆ  ಕೊಡಬೇಕು ಎಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಬಿಐಗೆ ಕೊಡುವ ವಿಚಾರದಲ್ಲಿ ಹೈಕೋರ್ಟ್ ಆದೇಶ ಮಾಡಿದೆ. ಸಿಬಿಐಗೆ ಕೊಡೋ ಅಗತ್ಯ ಇಲ್ಲ. ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಎರಡು ಏಜೆನ್ಸಿಗಳು ಒಂದೇ ವಿಷಯದಲ್ಲಿ ತನಿಖೆ ಮಾಡೋದು ಕಾನೂನಿಗೆ ವಿರುದ್ದ ಅಂತ ಹೇಳಿದ್ದಾರೆ. ಲೋಕಾಯುಕ್ತದವರು ಕ್ಲೀನ್ ಚಿಟ್ ಕೊಟ್ಟಿದ್ದಾರೆ ಅಂದರೆ ಲೋಕಾಯುಕ್ತ ತನಿಖೆಯಲ್ಲಿ ಬಿಜೆಪಿ ಪ್ರಶ್ನೆ ಮಾಡ್ತಿದೆಯಾ ಅಂತ ಪ್ರಶ್ನೆ ಮಾಡಿದರು.

ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕಾರ – vishwanews24

ಲೋಕಾಯುಕ್ತಗೆ ಸಿಕ್ಕ ಸಾಕ್ಷಿ ಆಧಾರದ ಮೇಲೆ ಅವರು ತೀರ್ಮಾನ ಮಾಡಿದ್ದಾರೆ .ಸಾಕ್ಷಿ, ಪುರಾವೆ ಇಲ್ಲ ಅಂದಾಗ ಅವರು ಒಂದು ತೀರ್ಮಾನ ಕೊಟ್ಟಿದ್ದಾರೆ. ಅದನ್ನ ಬಿಜೆಪಿ ಪ್ರಶ್ನೆ ಮಾಡೋದು ಎಷ್ಟು ಸರಿ? ಬಿಜೆಪಿ ಅವರಿಗೆ ಅನುಕೂಲ ಆದಾಗ ಎಲ್ಲವೂ ಸರಿ ಇರುತ್ತದೆ. ಇವರಿಗೆ ವಿರುದ್ಧವಾಗಿ ಬಂದರೆ ವಿಚಾರ ಸರಿ ಇರೋದಿಲ್ಲವಾ? ಇದು ಎಂತಹ ರಾಜಕೀಯ ಅಂತ ನನಗೆ ಗೊತ್ತಿಲ್ಲ ಅಂತ ಬಿಜೆಪಿ ಮೇಲೆ ಕಿಡಿಕಾರಿದರು.

Leave a Reply