ಮುಲ್ಕಿ : ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳು ಹಾಗೂ ಪತ್ನಿಯನ್ನು ಬಾವಿಗೆ ತಳ್ಳಿ ಹತ್ಯೆಗೆ ಯತ್ನಿಸಿದ್ದು, ಬಳಿಕ ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಿನ್ನಿಗೋಳಿ ಸಮೀಪ ನಡೆದಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಸಾವನಪ್ಪಿದ್ದಾರೆ.
ಪದ್ಮನೂರು ಶೆಟ್ಟಿಗಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಶಾಲೆಯಿಂದ ಬಂದ ಮಕ್ಕಳನ್ನು ಮನೆಯ ಪಕ್ಕದಲ್ಲಿದ್ದ ಬಾವಿಗೆ ತಳ್ಳಿದ್ದಾನೆ. ಬಳಿಕ ಮನೆಗೆ ಬಂದ ಪತ್ನಿ ಹಿತೇಶ್ ಶೆಟ್ಟಿಗಾರ್ ಅವರಲ್ಲಿ ಮಕ್ಕಳ ಬಗ್ಗೆ ಕೇಳಿದಾಗ ಎಲೋ ಅಡಗಿರಬಹುದು ಎಂದು ಹೇಳಿದ್ದಾನೆ, ಮನೆಯಲ್ಲಿ ಹುಡುಕಿ ಸಿಗದಿದ್ದಾಗ ಸಮೀಪದ ಮನೆಯ ಬಾವಿ ಕಡೆ ಹುಡುಕಾಡಿದಾಗ ಬಾವಿಯಲ್ಲಿ ಮಕ್ಕಳು ನೀರಿನಲ್ಲಿ ಕಂಡು ರಕ್ಷಣೆಗೆ ಮುಂದಾದಾಗ ಪತ್ನಿಯನ್ನು ಹಿಂಬಾಲಿಸಿಕೊಂಡು ಬಂದ ಪತಿ ಪತ್ನಿಯನ್ನೂ ಬಾವಿಗೆ ದೂಡಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪತ್ನಿ ಲಕ್ಷಿ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾದ್ಯವಾಗದೆ ಕೂಗಿದಾಗ ರಸ್ತೆಬದಿಯಲ್ಲಿ ಹೂ ಮಾರುವವವರು ಮತ್ತು ಇಬ್ಬರು ಬಾವಿಯ ಬಳಿ ಬಂದು ಹಿತೇಶ್ ಮತ್ತು ಲಕ್ಷೀ ಅವರನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ. ಕೂಡಲೇ ಮೂಲ್ಕಿ ಪೋಲಿಸರಿಗೆ ಮಾಹಿತಿ ನೀಡಿದ್ದು, ಅಗ್ನಿ ಶಾಮಕದಳ ಸಹಾಯದಿಂದ ಮೂಲ್ಕಿ ಪೋಲಿಸರು ಮೂವರೂ ಮಕ್ಕಳನ್ನು ಮೆಲಕ್ಕೆತ್ತಲಾಯಿತು. ಆದರೆ ಚಿಂತಾಜನಕ ಸ್ಥಿತಿಯಲ್ಲಿ ಅಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮಕ್ಕಳು ಮೃತಪಟ್ಟಿದ್ದಾರೆ.
ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್ ವಿತರಣೆ ಮಂಗಳೂರು: ತಡೆಗೋಡೆ…
ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ಫಸ್ಟ್ ರಿಯಾಕ್ಷನ್ ಆಡಿಯೋ ಧ್ವನಿ ತಮ್ಮದಲ್ಲ ಎಂದು ಸದಾನಂದಗೌಡರೇ ಹೇಳಿದ್ದಾರೆ ;…
ಬೆಳಗಾವಿ : ಜುಲೈ 10 ರಿಂದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಜು.6 ಕ್ಕೆ ಬೆಳಗಾವಿಗೆ…
ಸಪ್ತಪದಿ ಸೇರಿ ಅಗತ್ಯ ವಿಧಿ-ವಿಧಾನಗಳು ನೆರವೇರಿದಾಗ ಮಾತ್ರ ಹಿಂದೂ ವಿವಾಹ ಮಾನ್ಯ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ಅಹಮದಾಬಾದ್: ಕೇವಲ…
ಪಾನ್ ಮಸಾಲಾ, ಗುಟ್ಕಾ ಮಾರಾಟ ಬ್ಯಾನ್ ಎಚ್ಚರಿಕೆ ನೀಡಿದ್ದ ಸಿಎಂ: ರಾಜ್ಯದಲ್ಲಿ 32 ಪಾನ್ ಮಸಾಲಾ ಮಾದರಿ ಸಂಗ್ರಹ ಬೆಂಗಳೂರು:…
ರಾಮನಗರ : ಕ್ರಷರ್ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ ರಾಮನಗರ: ರಾಮನಗರ ಜಿಲ್ಲೆಯ ಬೆಂಗಳೂರು…