ಮುಲ್ಕಿ: ಬಪ್ಪನಾಡು ಜಾತ್ರೆ- ದೇವರ ರಥ ಹೋಗುವ ದಾರಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಬದಿಗೆ ದೂಡಿ ಹಾಕಿದ ಭಕ್ತರು ; ಸಾಮಾಜಿಕ ಜಾಲತಾಣದಲ್ಲಿ ವೈರಲ್ – Vishwanews24
ಮುಲ್ಕಿ: ಬಪ್ಪನಾಡು ಜಾತ್ರೆ- ದೇವರ ರಥ ಹೋಗುವ ದಾರಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಬದಿಗೆ ದೂಡಿ ಹಾಕಿದ ಭಕ್ತರು ; ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮಂಗಳೂರು: ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಯ ಸಂದರ್ಭ ದೇವರ ರಥ ಚಲಿಸುವ ದಾರಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಭಕ್ತರು ಬದಿಗೆ ಸರಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ರಥ ಹೋಗುವ ದಾರಿಯಲ್ಲಿ ಕೆಲವರು ವಾಹನಗಳನ್ನ ಪಾರ್ಕ್ ಮಾಡಿದ್ದರು. ಇದರಿಂದಾಗಿ ದೇವರ ರಥ ಚಲಿಸಲು ಸಮಸ್ಯೆ ಉಂಟಾಗಿತ್ತು, ಈ ಹಿನ್ನಲೆ ರಥಕ್ಕೆ ಹೋಗಲು ದಾರಿ ಮಾಡುವ ಸಲುವಾಗಿ ಭಕ್ತರು, ಪಾರ್ಕ್ ಮಾಡಿದ ಕಾರು, ರಿಕ್ಷಾ , ಬೈಕ್‌ಗಳನ್ನು ಬದಿಗೆ ದೂಡಿ ಹಾಕಿದ್ದಾರೆ. ವಾಹನಗಳನ್ನು ಬದಿಗೆ ದೂಡಿ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿದೆ.
3.5 ಕೋಟಿ ಒಡೆಯ ಕೋಟ ಶ್ರೀನಿವಾಸ ಪೂಜಾರಿ : ಇಲ್ಲಿದೆ ಆಸ್ತಿ ವಿವರ – Vishwanews24
