ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಭೇಟಿ – Vishwanews24
ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಭೇಟಿ – Vishwanews24
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್ ನ ನಾಯಕಿ ನಟಿ ರಚಿತಾ ರಾಮ್ ಇಂದು ಭೇಟಿ ನೀಡಿದರು.
ದೇವಾಲಯಕ್ಕೆ ಭೇಟಿ ನೀಡಿದ ನಟಿಯನ್ನು ದೇವಸ್ಥಾನ ಆಡಳಿತ ಮಂಡಳಿಯ ಪ್ರಮುಖರು ಗೌರವದಿಂದ ಬರಮಾಡಿಕೊಂಡರು. ತಾಯಿ ಆಶೀರ್ವಾದ ಪಡೆಯಲು ಬಂದಿದ್ದೇನೆ. ಮನಸಾರೆ ಪ್ರಿಯೊಬ್ಬರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದೆ. ಪ್ರತೀ ವರ್ಷ ಇಲ್ಲಿನ ದೇವಸ್ಥಾನಕ್ಕೆ ಬರುತ್ತಿದ್ದೇನೆ. ಜೊತೆಗೆ ಕರಾವಳಿ ಖಾದ್ಯಗಳು ನನಗೆ ತುಂಬಾ ಇಷ್ಟ ಎಂದರು.
ದೇವಳದ ಆಡಳಿತ ಮೊಕ್ತೇಸರ ಎನ್ .ಎಸ್ ಮನೋಹರ್ ಶೆಟ್ಟಿ, ಅರ್ಚಕ ನರಸಿಂಹ ಭಟ್ ಶಿವಶಂಕರ್ ವರ್ಮ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ನಾಗೇಶ್ ಬಪ್ಪನಾಡು ಉಪಸ್ಥಿತರಿದ್ದರು.
