ಮುಸ್ಲಿಂರಿಗೆ ಅಯೋಧ್ಯಯಲ್ಲಿ ಜಾಗ ಕೊಟ್ಟರೆ ಅಯೋಧ್ಯೆಯನ್ನು ಮತ್ತೊಂದು ಮೆಕ್ಕಾ ಮಾಡಲು ತಯಾರಿ ನಡೆಸುತ್ತಾರೆ : ನಿಶ್ಚಲಾನಂದ ಶ್ರೀ -Vishwanews24

Featured, ಉಡುಪಿ

ಉಡುಪಿ: ಒಂದು ವೇಳೆ ಮುಸ್ಲಿಂರಿಗೆ ಅಯೋಧ್ಯಯಲ್ಲಿ ಮಂದಿರ ಕಟ್ಟಲು ಜಾಗ ಕೊಟ್ಟರೆ, ಅಥವಾ ರಾಮ ಮಂದಿರದ ಪಕ್ಕಾ ಶಿಕ್ಷಣ ಕೇಂದ್ರ ಮದ್ರಸ ಕಟ್ಟಲು ಅವಕಾಶ ಕೊಟ್ಟರೆ, ಶಾಂತಿ ಸಾಮರಸ್ಯದ ಹೆಸರಲ್ಲಿ, ಅಯೋಧ್ಯೆಯ ಹೊರಗೆ ಇನ್ನೊಂದು ಪಾಕಿಸ್ತಾನ ಆರಂಭಕ್ಕೆ ಅಭಿಯಾನ ಶುರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ, ಎಂದು ಶ್ರೀ ಪುರಿ ಗೋವರ್ಧನ ಫೀಠದ ಶ್ರೀ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿಯವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪುರಿ ಶ್ರೀ ನಿಶ್ಚಲಾನಂದ ಸ್ವಾಮೀಜಿ ಅಯೋಧ್ಯೆ ತೀರ್ಪಿನ ಬಗ್ಗೆ ಅಸಮಾಧಾನ ಹೊರ ಹಾಕಿದರು. ಅಯೋಧ್ಯೆಯಲ್ಲಿ ಮುಸ್ಲೀಮರಿಗೆ ಒಂದಿಂಚೂ ಭೂಮಿ ನೀಡಬಾರದು. ಅಯೋಧ್ಯೆಯನ್ನು ಮುಸಲ್ಮಾನರು ಮತ್ತೊಂದು ಮೆಕ್ಕಾ ಮಾಡಲು ತಯಾರಿ ನಡೆಸುತ್ತಾರೆ ನೋಡುತ್ತಿರಿ ಎಂದು ಪೇಜಾವರಶ್ರೀ ಮುಂದೆ ಕೋಪ ಹೊರಹಾಕಿದರು. ಸುಪ್ರೀಂ ಕೋರ್ಟಿಗಿಂತ ಪಾರ್ಲಿಮೆಂಟ್ ದೊಡ್ಡದು. ಪಾರ್ಲಿಮೆಂಟಲ್ಲಿ ಬಿಜೆಪಿಗೆ ಬಹುಮತ ಇದೆ. ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದು ಮಾಡಲಿ ಎಂದರು.

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣವಾಗದಂತೆ ಬಿಜೆಪಿ ಸರ್ಕಾರ ನೋಡಿಕೊಳ್ಳಬೇಕು ಎಂದು ಪುರಿ ಶ್ರೀಗಳು ತಾಕೀತು ಮಾಡಿದರು. ಧಾರ್ಮಿಕ ವಿಚಾರದಲ್ಲಿ ಸಂತರೇ ಸುಪ್ರೀಂ. ಸುಪ್ರೀಂ ಕೋರ್ಟ್ ಯಾಕೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿ ಸೆಕ್ಯೂಲರ್ ಸಂವಿಧಾನವನ್ನು ನಾನು ಒಪ್ಪೋದಿಲ್ಲ ಎಂದರು.

ಭಾರತದ ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನ 940 ಎಕರೆ ವಿಸ್ತೀರ್ಣ ಹೊಂದಿದೆ. ದೇಶವೊಂದರ ಪ್ರಥಮ ಪ್ರಜೆಯ ಭವನವೇ ಇಷ್ಟೊಂದು ವಿಸ್ತಾರ ಹೊಂದಿರುವಾಗ ಜಗತ್ಪ್ರಭುವಾದ ಅಯೋಧ್ಯಾಪತಿ ಶ್ರೀರಾಮಚಂದ್ರನ ಭವ್ಯ ದೇಗುಲ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನಕ್ಕಿಂತ ಕಡಿಮೆ ವಿಸ್ತಾರ ಹೊಂದಕೂಡದು ಎಂದು ಪೂರ್ವಾಮ್ನಾಯ ಪುರಿ ಜಗನ್ನಾಥ ಪೀಠದ ಪರಮಾಚಾರ್ಯ ಶ್ರೀ ನಿಶ್ಚಲಾನಂದ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.

ಈ ಹಿಂದೆ ಪಿ.ವಿ. ನರಸಿಂಹ ರಾವ್ ಸರಕಾರವಿದ್ದಾಗ ಇಂತದ್ದೇ ರಾಜಿ ಪತ್ರಕ್ಕೆ ನಾನು ಸಹಿ ಹಾಕಿರಲಿಲ್ಲ. ಒಂದು ವೇಳೆ ಹಾಕಿದ್ದರೆ ಇಂದು ಆಗುವುದು ಅಂದೇ ಆಗುತ್ತಿತ್ತು. ಮೂರು ಮುಸ್ಲಿಂ ನಾಯಕರನ್ನು ಈ ದೇಶದ ಪ್ರತಿಷ್ಠಿತ ಹುದ್ದೆಗೆ ನೇಮಕ ಮಾಡಿದೆ. ಈ ಹಿಂದೆ ಅನೇಕರು ನಮ್ಮ ದೇಶವನ್ನು ಆಳಿದ್ದಾರೆ. ನಮ್ಮ ಭಾರತೀಯರ ಔದಾರ್ಯತೆಯನ್ನು ದುರುಪಯೋಗ ಪಡಿಸಬಾರದು, ಎಂದು ಪುರಿ ಸ್ವಾಮೀಜಿಗಳು ಹೇಳಿದರು.