ಧಾರವಾಡ: ಮುಸ್ಲಿಮರಿಗೆ ಈಗ ತಾವು ತಪ್ಪು ಮಾಡುತ್ತಿದ್ದೇವೆ ಎಂದು ಅರ್ಥ ಆಗಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆಮಾತನಾಡಿದ ಅವರು, ಮುಸ್ಲಿಮರು ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿರುವುದು ಸಂತಸ ತಂದಿದೆ. ಯಾವುದೇ ಸರ್ಕಾರ ಯಾವುದೇ ನಿರ್ಣಯ ತಂದಾಗ ಪ್ರಶ್ನೆ ಮಾಡುವ ಹಕ್ಕು ಇದೆ. ಆದರೆ ಅದು ಪ್ರಜಾಪ್ರಭುತ್ವದ ಮೂಲಕ ಆಗಬೇಕು. ದೇಶದ ಪರ ಇರೋರು ಮತ್ತು ದೇಶ ತುಂಡರಿಸಬೇಕು ಎನ್ನುವವರ ಮಧ್ಯೆ ಈಗ ಹೋರಾಟ ನಡೆಯುತ್ತದೆ. ಇದು ಎಡಪಂತಿ ಮತ್ತು ಬಲಪಂತಿ ಮಧ್ಯದ ಹೋರಾಟ ಅಲ್ಲ ಎಂದು ಹೇಳಿದರು.
ಪರಿಸ್ಥಿತಿ ಕೈ ಮೀರಿ ಹೋದ ಬಳಿಕ ಆಡಳಿತ ಪಕ್ಷ ಅರ್ಥ ಮಾಡಿಸುವ ಕೆಲಸ ಮಾಡುತ್ತಿದೆ. ದುರದೃಷ್ಟಕರ ಸಂಗತಿ ಅಂದರೆ ವಿರೋಧ ಪಕ್ಷಗಳ ಕೂಡ ರಾಷ್ಟ್ರೀಯ ಹಿತದ ದೃಷ್ಟಿಯ ನಿರ್ಣಯ ಬೆಂಬಲಿಸಬೇಕು. ನನ್ನ ವೋಟ್ ಬ್ಯಾಂಕ್, ನಾನು ಗೆಲ್ಲಬೇಕು ಎನ್ನುವ ದೃಷ್ಟಿಯಿಂದ ಪ್ರಚೋದನೆ ಕೊಡುವುದು ಸರಿಯಲ್ಲ. ಆದರೆ ಅದು ಆಗಿ ಹೋಗಿದೆ. ಮುಸ್ಲಿಮರಿಗೆ ಈಗ ತಾವು ತಪ್ಪು ಮಾಡುತ್ತಿದ್ದೇವೆ ಎಂದು ಅರ್ಥ ಆಗಿದೆ ಎಂದು ಹೇಳಿದರು.
ಲೋಕಸಭೆ ಮತ್ತು ರಾಜ್ಯಸಭೆ ಚರ್ಚೆ ನೋಡಿದರೆ ಪ್ರಜ್ಞಾವಂತರಾದವರಿಗೆ ಸಿಎಎ ಬಗ್ಗೆ ಅರಿವಾಗುತ್ತಿತ್ತು. ಲೋಕಸಭೆ, ರಾಜ್ಯಸಭೆ ಟಿವಿ ವಿಶ್ಲೇಷಣೆ ಯಾರಿಗೆ ಅರ್ಥವಾಗಿಲ್ಲವೋ ಅವರಿಗೆ ತಿಳಿಸುವ ಪ್ರಯತ್ನ ಆಡಳಿತ ಪಕ್ಷ ಮಾಡಬೇಕಿತ್ತು. ಸದಯ ಈಗ ಮುಸ್ಲಿಮರ ಪ್ರತಿಭಟನೆಯ ಮೂಡ್ ಬದಲಾಗಿದೆ. ಈಗ ಶಾಂತಿಯುತವಾಗಿ ಪೋಲೀಸರಿಗೆ ಹೂವು ಕೊಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿಭಟನೆ ಎಲ್ಲರ ಹಕ್ಕು ಆದರೆ ಪ್ರಜಾಪ್ರಭುತ್ವ ಧಿಕ್ಕರಿಸಿ ಪ್ರತಿಭಟನೆ ಮಾಡಬಾರದು. ಮಂಗಳೂರು ಗಲಭೆ ಮೊದಲು ನ್ಯಾಯಾಂಗ ತನಿಖೆ ಆಗಬೇಕಿತ್ತು. ಮೊದಲು ಗಲಭೆಯ ತನಿಖೆಯಾಗಲಿ. ಕೇರಳದಿಂದ ಎಷ್ಟು ಜನ ಬಂದಿದ್ದರು ಎನ್ನುವುದೆಲ್ಲ ತನಿಖೆಯಾಗಬೇಕು. ಗಲಭೆ ಹಿಂದೆ ಯಾರ ಯಾರ ಕೈವಾಡ ಇದೆ ಅನ್ನೋದು ಸ್ಪಷ್ಟವಾಗಬೇಕು ಎಂದು ಅಗ್ರಹಿಸಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…