ಮುಸ್ಲಿಮರು ವೋಟ್ ಹಾಕದಿದ್ದರೆ ಕಾಂಗ್ರೆಸ್‌ಗೆ ಸೋಲು ಖಚಿತ : ಕಮಲ್‌ನಾಥ್

Featured, ದೇಶ

‘ಕೆಲವು ಬೂತ್‌ಗಳಲ್ಲಿ ಮತದಾನದ ಪ್ರಮಾಣ ಶೇ 60ರಷ್ಟಿದ್ದರೆ, ವೋಟಿಂಗ್ ಪ್ರಮಾಣ ಕುಸಿತದ ಕಾರಣವನ್ನು ಪತ್ತೆ ಮಾಡಬೇಕಿದೆ. ನಮಗೆ 80% ಮುಸ್ಲಿಂ ಮತಗಳು ಸಾಲದು; ಶೇ 90ರಷ್ಟು ಮುಸ್ಲಿಂ ಮತಗಳು ಬೇಕು. ಶೇ. 90ರಷ್ಟು ಮುಸ್ಲಿಮರು ನಮಗೆ ಮತ ಹಾಕದಿದ್ದರೆ ಭಾರೀ ಸೋಲು ಖಚಿತ’ ಎಂದು ಕಮಲ್‌ನಾಥ್ ಹೇಳಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ಹೊಸದಿಲ್ಲಿ: ಶೇ 90ರಷ್ಟು ಮುಸ್ಲಿಂ ಮತದಾರರು ನಮಗೆ ಮತ ಹಾಕದಿದ್ದರೆ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾದೀತು ಎಂದು ಪಕ್ಷದ ಹಿರಿಯ ನಾಯಕ ಕಮಲ್‌ನಾಥ್ ಹೇಳಿರುವುದು ಮಧ್ಯಪ್ರದೇಶ ಚುನಾವಣೆ ಪ್ರಚಾರದಲ್ಲಿ ಮತ್ತೊಂದು ವಿವಾದ ಸೃಷ್ಟಿಸಿದೆ.

ಪಕ್ಷದ ಆಂತರಿಕ ಸಭೆಯಲ್ಲಿ ಕಮಲ್‌ನಾಥ್ ಈ ಮಾತು ಹೇಳಿದ್ದಾರೆ ಎಂಬ ವೀಡಿಯೋ ಒಂದು ವೈರಲ್ ಆಗಿದೆ. ‘ಮಧ್ಯಪ್ರದೇಶದ ಮುಸ್ಲಿಂ ಬಾಹುಳ್ಯದ ಬೂತ್‌ಗಳಲ್ಲಿ ಹಿಂದಿನ ಚುನಾವಣೆಯ ಮತದಾನ ಪ್ರಮಾಣವನ್ನು ಅದ್ಯಯನ ಮಾಡುವುದು ಅಗತ್ಯವಿದೆ. ಮುಸ್ಲಿಮರು ಯಾಕೆ ಮತ ಚಲಾಯಿಸಲು ಬರುವುದಿಲ್ಲ ಎಂಬುದನ್ನು ಪತ್ತೆ ಮಾಡಬೇಕಿದೆ’ ಎಂದು ಕಮಲ್‌ನಾಥ್ ಹೇಳಿರುತ್ತಾರೆ..

‘ಕೆಲವು ಬೂತ್‌ಗಳಲ್ಲಿ ಮತದಾನದ ಪ್ರಮಾಣ ಶೇ 60ರಷ್ಟಿದ್ದರೆ, ವೋಟಿಂಗ್ ಪ್ರಮಾಣ ಕುಸಿತದ ಕಾರಣವನ್ನು ಪತ್ತೆ ಮಾಡಬೇಕಿದೆ. ನಮಗೆ 80% ಮುಸ್ಲಿಂ ಮತಗಳು ಸಾಲದು; ಶೇ 90ರಷ್ಟು ಮುಸ್ಲಿಂ ಮತಗಳು ಬೇಕು. ಶೇ. 90ರಷ್ಟು ಮುಸ್ಲಿಮರು ನಮಗೆ ಮತ ಹಾಕದಿದ್ದರೆ ಭಾರೀ ಸೋಲು ಖಚಿತ’ ಎಂದು ಕಮಲ್‌ನಾಥ್ ಹೇಳಿರುವುದು ವೀಡಿಯೋದಲ್ಲಿದಾಖಲಾಗಿದೆ.