‘ಮುಸ್ಲಿಮರ ಮೇಲೆ ಗೋರಕ್ಷಕರ ಹಲ್ಲೆ ತಡೆಯದಿದ್ದರೆ ದೇಶ ಮತ್ತೊಮ್ಮೆ ವಿಭಜನೆಯಾಗುತ್ತೆ’ : ಮುಜಾಫರ್ ಹುಸೇನ್ ಬೇಗ್
ಶ್ರೀನಗರ,: ಗೋರಕ್ಷಣೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಹತ್ಯೆ ಘಟನೆಗಳನ್ನು ತಡೆಯದಿದ್ದರೆ ದೇಶ ಮತ್ತೊಮ್ಮೆ ವಿಭಜನೆಯಾಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಮಾಜಿ ಪಿಡಿಪಿ ಹಿರಿಯ ಮುಖಂಡ ಮುಜಾಫರ್ ಹುಸೇನ್ ಬೇಗ್ ವಿವಾದಿತ ಹೇಳಿಕೆ ನೀಡಿದ್ದಾರೆ. ಗೋವಿನ ಕಳ್ಳ ಸಾಗಾಟಗಾರ ಎಂಬ ಆರೋಪದ ಮೇರೆಗೆ ರಾಜಸ್ಥಾನದ ಅಲ್ವರ್‍ನಲ್ಲಿ ಅಕ್ಬರ್ ಖಾನ್ ಎಂಬಾತನನ್ನು ಬಡಿದು ಹತ್ಯೆಗೈದ ಬೆನ್ನಲ್ಲೇ, ಈ ವಿವಾದಿತ ಹೇಳಿಕೆ ನೀಡಿರುವ ಅವರು, ಇಂಥ ಘಟನೆ ತಡೆಯದಿದ್ದರೆ ಅದರ ಪರಿಣಾಮ ಸರಿಯಿರುವುದಿಲ್ಲ. ಈಗಾಗಲೇ 1947ರಲ್ಲಿ ದೇಶ ಇಬ್ಭಾಗವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈಗ ಗೋರಕ್ಷಣೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಹಿಂದುತ್ವದ ನೆಪವೊಡ್ಡಿ ಹಿಂದು-ಮುಸ್ಲಿಮರ ನಡುವೆ ಅಂತರ ಸೃಷ್ಟಿಸಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ದೇಶ ಇಬ್ಬಾಗವಾಗಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಜಾಹಿರಾತು: vyshali Bar& Family Restaurant kaup:
prop: NAYESH P SHETTY: 9620427036
