ಮೂಡುಬಿದಿರೆ : ಅಕ್ರಮ ಕಸಾಯಿಖಾನೆ ಮೇಲೆ ಹಿಂಜಾವೇ ದಾಳಿ : 4 ಗೋವು ಮತ್ತು ಭಾರಿ ಪ್ರಮಾಣದ ಮಾಂಸ ವಶ – Vishwanews24

Featured, ದಕ್ಷಿಣ ಕನ್ನಡ

ಮೂಡುಬಿದಿರೆ : ಅಕ್ರಮ ಕಸಾಯಿಖಾನೆ ಮೇಲೆ ಹಿಂಜಾವೇ ದಾಳಿ : 4 ಗೋವು ಮತ್ತು ಭಾರಿ ಪ್ರಮಾಣದ ಮಾಂಸ ವಶ

ಮೂಡುಬಿದಿರೆ: ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆಗೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಬೆಳ್ಳಂಬೆಳಗ್ಗೆ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮೂಡುಬಿದಿರೆಯ ಅಲಂಗಾರುವಿನಲ್ಲಿ ನಡೆದಿದೆ.

ಅಲಂಗಾರು ಆಶ್ರಯ ಕಾಲೋನಿಯಲ್ಲಿರುವ ಗಿಲ್ಬರ್ಟ್ ಮಿರಾಂದ ಎಂಬಾತ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ.

Mangaluru Hindu Jagarana Vedike raids illegal slaughterhouse in Moodabidri  dakshina kannada news in kannada - ಮಂಗಳೂರು: ಅಕ್ರಮ ಕಸಾಯಿ ಖಾನೆಗೆ  ಬೆಳ್ಳಂಬೆಳಗ್ಗೆ ಹಿಂದೂ ಜಾಗರಣಾ ವೇದಿಕೆ ದಾಳಿ| TV9 Kannada

ಬೆಳಗ್ಗೆ 4 ಗಂಟೆಗೆ ಹಿಂಜಾವೇ ಕಾರ್ಯಕರ್ತರು ದಾಳಿ ನಡೆಸಿದ್ದು, ವಧೆ ಮಾಡಲು ತಂದಿದ್ದ 4 ಗೋವು ಮತ್ತು ಭಾರಿ ಪ್ರಮಾಣ ಮಾಂಸ, ದನದ ತಲೆಯ ಭಾಗಗಳು ಪತ್ತೆಯಾಗಿವೆ.

ಮೂಡುಬಿದಿರೆ :  20ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಅದ್ಧೂರಿ ಚಾಲನೆ – VIshwanews24

ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಕೆ.ಜಿ.ಗಟ್ಟಲೆ ಮಾಂಸ ಸಹಿತ ಕ್ಲಾರಿನ್ ಅಲ್ವಿನ್ ಮತ್ತು ಗಿಲ್ಬರ್ಟ್ ಮಿರಂದ ಎಂಬ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

ಘಟನೆ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply