ಮೂಡುಬಿದಿರೆ: ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿಬಿದ್ದ ಬೃಹತ್ ಕ್ರೇನ್; ಮನೆಮಂದಿ ಅಪಾಯದಿಂದ ಪಾರು -vishwanews24

Featured, ದಕ್ಷಿಣ ಕನ್ನಡ

ಮೂಡುಬಿದಿರೆ: ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿಬಿದ್ದ ಬೃಹತ್ ಕ್ರೇನ್; ಮನೆಮಂದಿ ಅಪಾಯದಿಂದ ಪಾರು

ಮೂಡುಬಿದಿರೆ: ಬೃಹತ್ ಕ್ರೇನ್ ವೊಂದು ಕಾರೊಂದಕ್ಕೆ ಢಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಪರಿಣಾಮವಾಗಿ ಮನೆ ಜಖಂಗೊಂಡ ಘಟನೆ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊರಂತಬೆಟ್ಟು ಬಳಿ ಶುಕ್ರವಾರ ನಡೆದಿದೆ.

ಮುಲ್ಕಿ- ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಕಲ್ಲಮುಂಡ್ಕೂರಿನ ಮೊರಂತಬೆಟ್ಡುವಿನ ತಿರುವಿನಲ್ಲಿ ಅತೀ ವೇಗದಲ್ಲಿ ಸಂಚರಿಸುತ್ತಿದ್ದ ಕ್ರೇನ್ ಚಾಲಕನ ನಿಯಂತ್ರಣ ತಪ್ಪಿ ಫೆಲಿಕ್ಸ್ ರೊಡ್ರಿಗಸ್ ಎಂಬವರ ಮನೆ ಮೇಲೆ ಬಿದ್ದಿದೆ. ಇದರಿಂದ ಮನೆಗೆ ಹಾನಿ ಸಂಭವಿಸಿದೆ.

ರಷ್ಯಾ ಅಧ್ಯಕ್ಷ ಪುಟಿನ್‌ಗೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ – vishwanews24

ಘಟನೆ ವೇಳೆ ಮನೆಮಂದಿ ಮನೆಯ ಇನ್ನೊಂದು ಪಾರ್ಶ್ವದಲ್ಲಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೀಡಾದ ಸಂದರ್ಭ ಕ್ರೇನ್ ನ ತುಂಡೊಂದು ಅದೇವೇಳೆ ಆ ರಸ್ತೆಯಾಗಿ ಸಂಚರಿಸುತ್ತಿದ್ದ ಕಾರೊಂದು ಮೇಲೆ ಬೀಳುವುದರಿಂದ ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂಡಿಗೋ ವಿಮಾನಯಾನ ವಿಳಂಬ : ರದ್ದತಿಗಳಿಗೆ ಸರ್ಕಾರದ ಏಕಸ್ವಾಮ್ಯ ನೀತಿಯೇ ಕಾರಣ: ರಾಹುಲ್ ಗಾಂಧಿ – vishwanews24

Leave a Reply