ಮೂಡುಬಿದಿರೆ: ಇಲ್ಲಿನ ಕೊಣಾಜೆಕಲ್ಲು ಗುಡ್ಡಕ್ಕೆ ಟ್ರಕ್ಕಿಂಗ್ ತೆರಳಿದ್ದ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದು ಸಿ.ಎ. ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ವರದಿಯಾಗಿದೆ.
ಪುತ್ತೂರು ತಾಲೂಕು ಇರ್ದೆ ಗ್ರಾಮದ ಬೆಟ್ಟಂಪಾಡಿ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಎಂಬವರ ಪುತ್ರ ಮನೋಜ್ ಎನ್. (22) ಮೃತಪಟ್ಟವರು.
ಮಂಗಳೂರಿನ ಸಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕೇರಳ ಅಡೂರು ನಿವಾಸಿ ಕಾರ್ತಿಕ್(22) ಹಾಗೂ ಮನೋಜ್ ಕೊಣಾಜೆಕಲ್ಲು ಗುಡ್ಡಕ್ಕೆ ಟ್ರೆಕ್ಕಿಂಗ್ಗೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಮನೋಜ್ ಆಕಸ್ಮಿಕವಾಗಿ ಗುಡ್ಡದಿಂದ ಜಾರಿಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಮೈಸೂರಿಗೆ ಪ್ರಧಾನಿ ಮೋದಿ : ಕಾಸ್ಮೋಸ್-ಮೈಸೂರು ತಾರಾಲಯ ಉದ್ಘಾಟನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರು ನಗರದ ಶಶಿರಂಜನ್…
ಬೆಂಗಳೂರು - ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಗೆ ಹಸಿರು ನಿಶಾನೆ ಮಂಗಳೂರು : ಮಂಗಳೂರಿನಿಂದ ಬೆಂಗಳೂರಿಗೆ ಸಂಚಾರ ಆರಂಭಿಸಲಿರುವ…
ಮಂಗಳೂರಿನ ಹೆಚ್ಚುವರಿ ರೈಲ್ವೆ ಜಂಕ್ಷನ್ ಆಗಿ ಪಡೀಲ್ ಅಭಿವೃದ್ಧಿಪಡಿಸಿ.. ಪಂಚಗಂಗಾ ಎಕ್ಸ್ಪ್ರೆಸ್ಗೆ ನಿಲುಗಡೆ ಕಲ್ಪಿಸಲು ಪಿ.ವಿ. ಮೋಹನ್ ಒತ್ತಾಯ ಮಂಗಳೂರು:…
ಬೆಂಗಳೂರು ಮೆಟ್ರೋದ ಪಿಂಕ್ ಲೈನ್ಗೆ ಪ್ರಧಾನಿ ಮೋದಿ ಹಸಿರು ನಿಶಾನೆ ; ಮೆಟ್ರೊದಲ್ಲಿ ಮುಖ್ಯಮಂತ್ರಿಗಳೊಂದಿಗೆ ಪ್ರಯಾಣ ರಾಜ್ಯಪಾಲರಾದ ಸುಧಾ ಯಾದವ್…
ಮಣಿಪಾಲ ವೇಶ್ಯಾವಾಟಿಕೆ ಪ್ರಕರಣ: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಪಶ್ಚಿಮ ಬಂಗಾಳದಲ್ಲಿ ಬಂಧನ ಮಣಿಪಾಲ: ವೇಶ್ಯಾವಾಟಿಕೆ ನಡೆಸಲು ಪಶ್ಚಿಮ ಬಂಗಾಳದಿಂದ ಮಹಿಳೆಯರನ್ನು…
ಮಂಗಳೂರು: ಮಂತ್ರದೇವತೆ ಸನ್ನಿಧಿ ಶ್ರೀ ಕ್ಷೇತ್ರ ಮಂದಾರಬೈಲು ನ.14ರಂದು ದೀಪಾಲಂಕಾರ ಸೇವೆ ಮಂಗಳೂರು: ಕೊಂಚಾಡಿ ದೇರೆಬೈಲ್ನ ಶ್ರೀ ಕ್ಷೇತ್ರ ಮಂದಾರಬೈಲು…