ಮೂಡುಬಿದಿರೆ: ಬೈಕ್ ಸ್ಕಿಡ್ ಆಗಿ ಮರಕ್ಕೆ ಢಿಕ್ಕಿ : ಸವಾರ ಸ್ಥಳದಲ್ಲೇ ಸಾವು – Vishwanews24

Featured, ದಕ್ಷಿಣ ಕನ್ನಡ

ಮೂಡುಬಿದಿರೆ: ಬೈಕ್ ಸ್ಕಿಡ್ ಆಗಿ ಮರಕ್ಕೆ ಢಿಕ್ಕಿ : ಸವಾರ ಸ್ಥಳದಲ್ಲೇ ಸಾವು

ಮೂಡುಬಿದಿರೆ: ಬೈಕ್ ಸ್ಕಿಡ್ ಆಗಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತೆರವುಗೊಳಿಸಿದ ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡುಬಿದಿರೆಯ ಬೆಳುವಾಯಿಯಲ್ಲಿ ನಡೆದಿದೆ.

ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ರಾಣಿಕೇರಿ ನಿವಾಸಿ, ಮೂಲತಃ ಚಿಕ್ಕಮಗಳೂರಿನ ರಾಜೇಶ್ (28)ಮೃತಪಟ್ಟ ಬೈಕ್ ಸವಾರ.

ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣ; ಆರೋಪಿ ಶಾರೀಕ್ ಗುರುತು ಪತ್ತೆ ಹಚ್ಚಲು ಮಂಗಳೂರಿಗೆ ಆಗಮಿಸಿದ ಹೆತ್ತವರು – Vishwanews24

ರಾಜೇಶ್ ಅವರು ಭಾನುವಾರ ಬಾಳೆಹೊನ್ನೂರಿನಲ್ಲಿ ಅಜ್ಜಿಯ ಅಂತ್ಯ ಸಂಸ್ಕಾರ ಮುಗಿಸಿ, ಮೂಡುಬಿದಿರೆಗೆ ವಾಪಾಸ್ಸಾಗುವಾಗ ಈ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಗಾಗಿ ಮರ ಕಡಿದು ರಸ್ತೆ ಪಕ್ಕದಲ್ಲಿ ಹಾಕಲಾಗಿದ್ದು, ಬೆಳುವಾಯಿ ಬಳಿ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡು ರಕ್ತಸ್ರಾವದಿಂದ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಜೇಶ್ ಅವರಿಗೆ ಒಂದುವರೆ ವರ್ಷದ ಹಿಂದೆ ಮದುವೆಯಾಗಿದ್ದು, ಐದು ತಿಂಗಳ ಮಗುವಿದೆ.

ಬೆಳ್ತಂಗಡಿ: ಟ್ರಕ್‌ಗೆ ಗೂಡ್ಸ್‌‌ ವಾಹನ ಢಿಕ್ಕಿ : ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು – Vishwanews24

Leave a Reply