ಮೂಳೂರು ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನ ಜಾರ್ದೆ  ಒಂದು‌ ತಿಂಗಳ ತುಡರ ಬಲಿ ಸೇವೆ ಸಂಪನ್ನ.

Featured, ಉಡುಪಿ

ಮೂಳೂರು ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನ ಜಾರ್ದೆ  ಒಂದು‌ ತಿಂಗಳ ತುಡರ ಬಲಿ ಸೇವೆ ಸಂಪನ್ನ.

ಕಾಪು: ಇತಿಹಾಸ ಪ್ರಸಿದ್ಧ ತುಳುನಾಡಿನ ದೈವಾಲಯಗಳಲ್ಲಿ ಒಂದಾದ ಮೂಳೂರು ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಪ್ರತಿವರ್ಷ ನಡೆಯುವ ಜಾರ್ದೆ ಒಂದು ತಿಂಗಳ ತುಡರ ಬಲಿ ಸೇವೆಯು ಕಳೆದ ನವೆಂಬರ್ ತಿಂಗಳ‌ ಸಂಕ್ರಾಂತಿಯಂದು‌ ಮೊದಲ್ಗೊಂಡು‌ ಡಿಸೆಂಬರ್ ತಿಂಗಳ ಸಂಕ್ರಾಂತಿಯಂದು‌ ಹತ್ತು ಸಮಸ್ತರ ತುಡರ ಬಲಿ ಸೇವೆಯೊಂದಿಗೆ ಸಂಪನ್ನ ಗೊಂಡಿತು.

ಹತ್ತು ಸಮಸ್ತರ ತುಡರ ಬಲಿಯ ಪ್ರಯುಕ್ತ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ಜರಗಿತು.

ಊರ ಪರ ಊರ ಸಾವಿರಾರು ಭಕ್ತರು ಭಾಗವಹಿಸಿದ್ದರು.