ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ – vishwanews24

Featured, ಉಡುಪಿ

ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘ ಸಭೆ ೨೦೨೩-೨೦೨೪

ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸಂಘದ ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸುಧಾಮ ಶೆಟ್ಟಿ ಮಾತಾಡಿ, ಸಂಘವು ೪,೫೪,೮೭೮ವಾರ್ಷಿಕ ನಿವ್ವಳ ಬಂಡವಾಳ ಹೊಂದಿದ್ದು ಸದಸ್ಯರಿಗೆ ಶೇ. ೨೫ ಡಿವಿಡೆಂಡ್ ಶೇ.೬೫ ಬೋನಸ್ ಘೋಷಿಸಲಾಗಿದೆ. ಭವಿಷ್ಯದಲ್ಲೂ ಸಂಘದ ಪ್ರಗತಿಗೆ ಎಲ್ಲಾ ಹೈನುಗಾರರು ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ತರಕಾರಿಗಳಿಗೆ ಕೆಮಿಕಲ್‌ ಸ್ಪ್ರೇ ಬಗ್ಗೆ ಕ್ರಮ : ಖಾದರ್‌ – vishwanews24

ಮುಖ್ಯ ಅತಿಥಿಯಾಗಿ ಬೆಂಗಳೂರು ಹಾಲು ಮಹಾ ಮಂಡಲದ ನಿರ್ದೇಶಕರು ಹಾಗೂ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಮಂಗಳೂರು ಇದರ ಗೌರವಾನ್ವಿತ ನಿರ್ದೇಶಕರಾದ ಶ್ರೀ ದೇವಿ ಪ್ರಸಾದ್ ಶೆಟ್ಟಿಯವರು ಮೊದಲಾಗಿ ಜಂತುಹುಳ ಔಷಧಿ ಶಿಬಿರವನ್ನು ಉದ್ಘಾಟಿಸಿ ಹೈನುಗಾರಿಕರಿಗೆ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಪಶು ವೈದ್ಯರಾದ ಡಾ. ಪ್ರಶಾಂತ್ ಆರ್.ಗುಜ್ಜಲ್‌ಕರ್, ಹೈನುಗಾರಿಕೆ ಬಗ್ಗೆ ಮಾಹಿತಿ ನೀಡಿದರು. ಕೆಎಂಎಫ್ ವಿಸ್ತರಣಾಧಿಕಾರಿ ಯಶವಂತ ಅವರು ಕೆಎಂಎಫ್ ನಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಸದಸ್ಯರಾದ ಗಿರಿಯಾನ್ ಅಮ್ಮಣ್ಣ ಶಶಿಧರ್ ಶೆಟ್ಟಿ ಬೆಳಪು, ಮನೇಶ ಶೆಟ್ಟಿ ಮಲ್ಲಾರು, ಇವರನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ಮಹಾಲಿಂಗ ಅಂಚನ್, ನಿರ್ದೇಶಕರಾದ ಪಿ.ಕೆ ಕರಿಯ ಮೊಯ್ಲಿ, ಶಶಿಧರ್ ಶೆಟ್ಟಿ, ಎಂ.ಎಸ್. ಅಬ್ದುಲ್ ರೆಹೆಮಾನ್, ಅಣ್ಣಯ್ಯ ಪೂಜಾರಿ, ಕಿಶೋರ್ ಕೋಟ್ಯಾನ್, ಗಣೇಶ್ ಬಿ. ಶೆಟ್ಟಿ, ಸುಹಾಸಿನಿ ಶೆಟ್ಟಿ, ಮನೇಶ ಶೆಟ್ಟಿ, ಮೋಹಿನಿ ಮತ್ತು ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು. ಸಂಘದ ಹಿರಿಯ ಸ್ಥಾಪಕ ನಿರ್ದೇಶಕರಾದ ಮಾಹಲಿಂಗ ಅಂಚನ್ ವiತ್ತು ಶ್ರೀ ಪಿ.ಕೆ ಕರಿಯ ಮೊಯ್ಲಿ ಇವರನ್ನು ಸನ್ಮಾನಿಸಲಾಯಿತು.

ಇನ್ನು ಮುಂದೆ ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ:  CM ಡಿ.ಕೆ. ಶಿ ಸ್ಪಷ್ಟನೆ – vishwanews24

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಾತ ಟಿ. ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಸದಸ್ಯ ಪ್ರಕಾಶ್ ಅಂಚನ್ ಅವರು ವಂದಿಸಿದರು. ರಾಷ್ಟçಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

Leave a Reply