ಉಡುಪಿ: ದುಷ್ಟ, ಸಮಾಜಘಾತುಕ ಪಿಎಫ್ ಐ ಬ್ಯಾನ್ ಮಾಡಬೇಕು. ಮೇ ಮೊದಲ ವಾರದಿಂದ ಬ್ಯಾನ್ ಪಿಎಫ್ಐ ಅಭಿಯಾನ ನಡೆಯುತ್ತದೆ. ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ಶ್ರೀರಾಮ ಸೇನೆ ಈ ವಿಚಾರವನ್ನು ಇಟ್ಟುಕೊಂಡು ಹೋರಾಟ ನಡೆಸಲಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ತನ್ನ ಮೇಲೆ ಹೇರಿರುವ ನಿರ್ಬಂಧದ ಕುರಿತು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಹಿಂದೂ ಸಂಘಟನೆಗಳಿಗೆ ಕೊಡುವ ಕಿರಿಕಿರಿ ನಾಳೆ ನಿಮಗೆ ತೊಂದರೆ ಆಗಲಿದೆ.
ನನ್ನ ಹಿಂದುತ್ವ ಕಾರ್ಯದ ಪೂರ್ಣ ಲಾಭವನ್ನು ಬಿಜೆಪಿ ಪಡೆದುಕೊಂಡಿದೆ. ಆದರೆ ಮೇಲಿಂದ ಮೇಲೆ ಈ ರೀತಿಯ ಬಿಜೆಪಿ ವರ್ತನೆ ಸರಿಯಲ್ಲ. ಬಿಜೆಪಿಯವರ ಈ ನಿಲುವು ಖಂಡಿಸುತ್ತೇನೆ’ ಎಂದರು.
ಕಾಂಗ್ರೆಸ್ ಇದ್ದಾಗಲೂ ಬ್ಯಾನ್ ನಿರ್ಧಾರ ಅನುಭವಿಸಬೇಕಿತ್ತು. ಆಗ ಅದನ್ನು ಎದುರಿಸಲು ನಮ್ಮಲ್ಲಿ ಜೋಷ್ ಬರುತ್ತಿತ್ತು ಎದುರಿಸಲು ಆನಂದ ಅನ್ನಿಸುತ್ತಿತ್ತು ಆದರೆ ಬಿಜೆಪಿ ಬ್ಯಾನ್ ನೋವು ತರುತ್ತದೆ . ಕಲ್ಲಂಗಡಿ ಒಡೆದದ್ದಕ್ಕೆ ನನ್ನ ಮೇಲೆ ಸೆಕ್ಷನ್ ಹಾಕಲಾಗಿದೆ.
ಈ ಮಾನಸಿಕತೆ ಸರಿಯಲ್ಲ. ಹಿಂದು ಸಂಘಟನೆ ಶಿಕ್ಷಿಸುವುದು ಸರಿಯಿಲ್ಲ. ಈ ಬಗ್ಗೆ ನಡವಳಿಕೆ ನೀತಿ ತಿದ್ದಿಕೊಳ್ಳಬೇಕು ಇಲ್ಲದಿದ್ದರೆ ಅನಾಹುತ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…