Featured

PM Kisan Yojana :  ಮೇ.22 ರೊಳಗಾಗಿ `ಇ-ಕೆವೈಸಿ’ ಕಡ್ಡಾಯ  ; ಇ-ಕೆವಾಯ್‍ಸಿ ಮಾಡಲು ಹೀಗೆ ಮಾಡಿ – Vishwanews24

PM Kisan Yojana :  ಮೇ.22 ರೊಳಗಾಗಿ `ಇ-ಕೆವೈಸಿ’ ಕಡ್ಡಾಯ ; ಇ-ಕೆವಾಯ್‍ಸಿ ಮಾಡಲು ಹೀಗೆ ಮಾಡಿ

ಬೆಂಗಳೂರು : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ  ರೈತರು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಗಡುವನ್ನು ಮೇ 22ರವರೆಗೆ ವಿಸ್ತರಿಸಲಾಗಿದೆ. ಮೇ 22, 2022 ರೊಳಗಾಗಿ ಇ-ಕೆವಾಯ್‍ಸಿ ಮಾಡಿಸಬೇಕು.

ಇ-ಕೆವಾಯ್‍ಸಿ ಮಾಡಿಸಲು ರೈತರು ಕೇಂದ್ರ ಸರ್ಕಾರದ ಜಾಲ ತಾಣವಾದ  https://pmkisan.gov.in/ಪೋರ್ಟಲ್‍ನ ಪಾರಮರ್ ಕಾರ್ನರ್‍ನ ಇ-ಕೆವಾಯ್‍ಸಿ ಅವಕಾಶದಡಿ ರೈತನ (ಫಲಾನುಭವಿ) ಆಧಾರ ಸಂಖ್ಯೆಯನ್ನು ನಮೂದಿಸಿ ನಂತರ ಆಧಾರ ಸಂಖ್ಯೆ ಯೊಂದಿಗೆ ನೊಂದಣಿಯಾದ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ಆಧಾರ ಕಾರ್ಡನೊಂದಿಗೆ ನೊಂದಣಿಯಾದ ಮೊಬೈಲ್ ಸಂಖ್ಯೆಗೆ ಓಟಿಪಿ ರವಾನೆಯಾಗುತ್ತದೆ. ನಂತರ ಸ್ವೀಕರಿಸಿದ ಒಟಿಪಿಯನ್ನು ದಾಖಲಿಸಿ ಸಬ್‍ಮಿಟ್ ಪಾರ್ ಯುತ್ ಎಂಬ ಬಟನ್ ಒತ್ತಬೇಕು. ಆಗ ತಂತ್ರಾಂಶ ಆಧಾರಿತ ಪರಿಶೀಲನೆ ನಡೆದು ಇ-ಕೆವಾಯ್‍ಸಿ ಸೆಕ್ಸಸ್ ಸಬ್‍ಮಿಟೆಡ್ ಎಂಬ ವಾಕ್ಯವು ಗೋಚರಿಸುತ್ತದೆ. ಹೀಗೆ ಮೊಬೈಲ್ ಓಟಿಪಿ ಆಧಾರಿತವಾಗಿ ಫಲಾನುಭವಿಯು ಖುದ್ದಾಗಿ ಇ-ಕೆವಾಯ್‍ಸಿ ಮಾಡಬಹುದಾಗಿದೆ.

ಯಾವ ಫಲಾನುಭವಿಯ ಮೊಬೈಲ್ ಸಂಖ್ಯೆ ಆಧಾರ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾವ ಮೊಬೈಲ್ ಸಂಖ್ಯೆಗೆ ಇ-ಕೆವಾಯ್‍ಸಿಗಾಗಿ ಕಳುಹಿಸಿದ ಓಟಿಪಿಯು ಸ್ವೀಕೃತವಾಗಿರುವುದಿಲ್ಲವೋ ಅಂತಹ ಫಲಾನುಭವಿಗಳು ಸಮೀಪದ ನಾಗರಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಬಯೋಮೆಟ್ರಿಕ್ ಯಂತ್ರದ ಮೂಖಾಂತರ ಇ-ಕೆವಾಯ್‍ಸಿ ಮಾಡಿಸಬಹುದಾಗಿದೆ. ಇಲ್ಲಿ ಕೈ ಬೆರಳಿನ ಗುರುತು ಆಧಾರದ ಮೇಲೆ ಇ-ಕೆವಾಯ್‍ಸಿ ಮಾಡಲಾಗುತ್ತದೆ. 2 ನೇ ಪ್ರಕ್ರಿಯೆ (ವಿಧಾನ) ಗಾಗಿ ಮಾತ್ರ ನಾಗರಿಕ ಸೇವಾ ಕೇಂದ್ರದವರಿಗೆ 15 ರೂ.ಗಳನ್ನು ಫಲಾನುಭವಿಯು ಪಾವತಿಸಬೇಕು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಬಹುದು.

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

11 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

13 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

13 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

14 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

14 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

14 hours ago