ಮೇ 23 ಅನ್ನು ‘ಮೋದಿ ದಿವಸ್​’ ಅಥವಾ ಲೋಕ ಕಲ್ಯಾಣ್ ದಿವಸ್ ಎಂದು ಆಚರಿಸಬೇಕು: ಬಾಬಾ ರಾಮ್​ದೇವ್ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಮೇ. 23 ನ್ನು `ಮೋದಿ ದಿವಸ್’ ಆಗಿ ಆಚರಿಸಬೇಕೆಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಕೋಟ್ಯಾಂತರ ಜನರ ವಿಶ್ವಾಸಗಳಿಸಿರುವ ಪ್ರಧಾನಿ ಮೋದಿಯನ್ನು ಬಾಬಾ ರಾಮ್ ದೇವ್ ಹಾಡಿ ಹೊಗಳಿದ್ದಾರೆ.

ಮೇ 23 ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಬಹುದೊಡ್ಡ ಜನಾದೇಶವನ್ನು ಗೆದ್ದ ಐತಿಹಾಸಿಕ ದಿನವಾಗಿದೆ. ಈ ದಿನವನ್ನು ಮೋದಿ ದಿವಸ್ ಅಥವಾ ಲೋಕ ಕಲ್ಯಾಣ್ ದಿವಸ್ ಎಂದು ಆಚರಿಸಬೇಕು ಎಂದರು.

ಸುದ್ದಿಗಾರೊಂದಿಗೆ ಮಾತನಾಡಿದ ಬಾಬಾ ರಾಮ್ ದೇವ್ ಅವರು, ಮೋದಿ ಕೋಟ್ಯಂತರ ಜನರ ನಂಬಿಕೆ ಗೆದ್ದಿದ್ದಾರೆ. ಒಂದು ಕಡೆ ಮಹಾಘಟ್​ಬಂಧನ್​, ಇನ್ನೊಂದು ಕಡೆ ಮೋದಿ ಚುನಾವಣೆಯಲ್ಲಿ ಹೋರಾಟ ನಡೆಸಿದರು. ಆದರೂ ಉತ್ತರ ಪ್ರದೇಶದಲ್ಲಿ ಮೋದಿ ಅವರು ಭರ್ಜರಿ ಜಯ ಸಾಧಿಸಿದರು. ಜನತೆ ಅವರ ಕೈಯಲ್ಲಿ ಸುರಕ್ಷಿತವಾಗಿದ್ದಾರೆ ಎಂದರು.