ಮೈಮೇಲೆ ಕಸ ಸುರಿದು ಗೆಳೆಯನ ಬರ್ತ್ ಡೇ ಆಚರಿಸಿಕೊಂಡ ವೈದ್ಯಕೀಯ ವಿದ್ಯಾರ್ಥಿಗಳು..

Featured, ಜಿಲ್ಲೆ

ಬೆಳಗಾವಿ : ಎಲ್ಲಾರಗೂ ಹುಟ್ಟಹಬ್ಬವೆಂದರೆ  ಸಂಭ್ರಮ ಸಡಗರ, ಶುಭಾಷಯಗಳು, ಪಾರ್ಟಿಗಳು, ಗಿಫ್ಟ್​ಗಳು,ಇವೆಲ್ಲಾ  ಜನುಮ ದಿನದಂದು ಕಾಮನ್​ ಆದರೆ  ಇಲ್ಲೊಬ್ಬ ಯುವಕ ಹುಟ್ಟುಹಬ್ಬವನ್ನು  ಆದರೆ ಇಲ್ಲೊಬ್ಬ ವಿದ್ಯಾರ್ಥಿಯ ಹುಟ್ಟುಹಬ್ಬವನ್ನು ಆತನ ಸ್ನೇಹಿತರು ಕಸವನ್ನು ಮೈಮೇಲೆ ಸುರಿದುಕೊಂಡು ವಿಚಿತ್ರವಾಗಿ ಆಚರಣೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣ ಶಿರಕೋಳಿ ಮೆಡಿಕಲ್ ಕಾಲೇಜಿನ ಬಿಎಚ್‍ಎಂಎಸ್ ವ್ಯಾಸಂಗಮಾಡುತ್ತಿರುವ  ವಿದ್ಯಾರ್ಥಿಗಳ ಗುಂಪಿನಲ್ಲಿ ಗೆಳೆಯನ ಹುಟ್ಟುಹಬ್ಬ ಆಚರಿಸಲು ಡಾಬಗೆ ಬಂದಿದ್ರು, ಈ ವೇಳೆ ಮನೋಜ್ ಕುಮಾರ್​ನ ಮೈ ಮೇಲೆ ಅಡುಗೆ ಎಣ್ಣೆ, ಮೊಟ್ಟೆ, ಮೊಸರು, ಹಿಟ್ಟು ಸೇರಿದಂತೆ ವಿವಿಧ ವಸ್ತುಗಳನ್ನ ಹಾಕಿ ವಿಚಿತ್ರವಾಗಿ ಬರ್ತ್ ಡೇ ಆಚರಿಸಿಕೊಂಡಿರುತ್ತಾರೆ..