ನವದೆಹಲಿ : ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಜ, 22 ರಂದು ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿಯನ್ನು ಅಂತಿಮಗೊಳಿಸಲಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆಯ ಮೂರ್ತಿಗೆ ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಮಾಡಲಾಗುತ್ತಿದೆ ಎಂದು ರಾಮಮಂದಿರ ಟ್ರಸ್ಟ್ ಮೂಲಗಳಿಂದ ತಿಳಿದುಬಂದಿದೆ.
ದೇಶದ ಮೂವರು ಪ್ರಮುಖ ಶಿಲ್ಪಿಗಳಾದ ಮೈಸೂರಿನ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರಿಗೆ ರಾಮಲಲ್ಲಾ ಮೂರ್ತಿಯನ್ನು ತಯಾರಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಮೂವರೂ ಶಿಲ್ಪಿಗಳು ತಮ್ಮ ಕಲ್ಪನೆಯ ರಾಮ ಲಲ್ಲಾನ ಮೂರ್ತಿಯನ್ನು ಕೆತ್ತಿ ಹಸ್ತಾಂತರ ಕೂಡ ಮಾಡಿದ್ದರು.
ಇನ್ನು ಈಗಾಗಲೇ ಹಸ್ತಾಂತವಾಗಿರುವ ಮೂರ್ತಿಗಳ ಪೈಕಿ ಒಂದನ್ನು ಆಯ್ಕೆ ಮಾಡಲು ಟ್ರಸ್ಟ್ ಒಂದು ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿ ಮೂರು ಮೂರ್ತಿಗಳ ಕೆತ್ತನೆಗೆ ಗುಣಮಟ್ಟ, ರಾಮನ ಬಾಲ್ಯದ ನೋಟ, ದೈವತ್ವ ಭಾವವನ್ನು ಪರಿಶೀಲಿಸಿದರು. ಬಳಿಕ ರಾಮ ಜನ್ಮಭೂಮಿ ಟ್ರಸ್ಟ್‌ನ ಸದಸ್ಯರ ನಡುವೆ ಮತದಾನ ನಡೆದು ಮೈಸೂರಿನ ಶಿಲ್ಪಿ ಯೋಗಿರಾಜ್ ಅವರ ಮೂರ್ತಿಯನ್ನು ಆಯ್ಕೆ ಮಾಡಲಾಯಿತು ಎಂದು ತಿಳಿದುಬಂದಿದೆ.
ಉಡುಪಿ : ಮೇ 5 ರಂದು ನೇರ ಸಂದರ್ಶನ ಉಡುಪಿ : ಉದ್ಯೋಗ ಆಕಾಂಕ್ಷಿಗಳಿಗೆ ಮೇ 5 ರಂದು ಬೆಳಗ್ಗೆ…
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ ಉಡುಪಿ : ಮಾಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ…
ಮೋದಿ ದುರಾಡಳಿತದ ವಿರುದ್ಧ ಮಾತಾಡಲು ಬಿಜೆಪಿಗರಿಗೆ ಸವಾಲು.. ಬಿಜೆಪಿಯ ಬಡಜನ ವಿರೋಧಿ ಬಣ್ಣ ಮತ್ತೆ ಬಯಲು.. ವಾಣಿಜ್ಯ ಸಿಲಿಂಡರ್ ದರ…
ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು ಕಾರವಾರ: ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡ…
ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಪರಾರಿ: ಮಕ್ಕಳಿಬ್ಬರನ್ನು ಕೊಲೆಗೈದು ನೇಣಿಗೆ ಶರಣಾದ ಪತಿ ಕುಣಿಗಲ್ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ…
NDMAಯಿಂದ ಬರುತ್ತೆ ತುರ್ತು ಎಚ್ಚರಿಕೆ ಸಂದೇಶ.. ನಿಮ್ಮ ಮೊಬೈಲ್‌ನಲ್ಲಿ ಅಲರ್ಟ್ ಸಂದೇಶ, ಸೈರನ್ ಮೊಳಗಿದ್ರೆ ಭಯಪಡಬೇಡಿ.. ನಿಮ್ಮ ಮೊಬೈಲ್ ಫೋನ್…