ಮೈಸೂರು: ರಾಜ್ಯಾದ್ಯಂತ ಮೈಸೂರು ದಸರಾ ಹಿನ್ನೆಲೆ 3000 ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಇದರೊಂದಿಗೆ ವಿಶೇಷ ಪ್ಯಾಕೇಜ್‌ಗಳ ಸೌಲಭ್ಯ ಮಾಡಲಾಗಿದೆ.
ಅ.16ರಿಂದ ಅ.27ರವರೆಗೆ ರಾಜ್ಯಾದ್ಯಂತ ಹೆಚ್ಚುವರಿ 3,000 ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯನಿರ್ವಹಿಸಲಿವೆ. ಜೊತೆಗೆ ಬೆಂಗಳೂರಿನಿಂದ ಮೈಸೂರಿಗೆ 700 ದಸರಾ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಇನ್ನೂ ಮೈಸೂರಿನಿಂದ ಒಂದು ದಿನದ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದೆ. ಗಿರಿದರ್ಶಿನಿ, ಜಲದರ್ಶಿನಿ ಹಾಗೂ ದೇವದರ್ಶಿನಿ ಎಂಬ ಮೂರು ಪ್ಯಾಕೇಜ್‌ಗಳ ವ್ಯವಸ್ಥೆ ಮಾಡಲಾಗಿದೆ. ಗಿರಿದರ್ಶಿನಿ ಪ್ಯಾಕೇಜ್‌ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ ಹಾಗೂ ಬಿಳಿಗಿರಿ ರಂಗಸ್ವಾಮಿ ಬೆಟ್ಟ ವೀಕ್ಷಣೆಗೆ ಅವಕಾಶ ಇರಲಿದೆ.
ಜಲದರ್ಶಿನಿ ಪ್ಯಾಕೇಜ್‌ನಲ್ಲಿ ಗೋಲ್ಡನ್ ಟೆಂಪಲ್, ದುಬಾರೆ, ನಿಸರ್ಗಧಾಮ, ಅಬ್ಬೆ ಜಲಪಾತ, ಹಾರಂಗಿ ಜಲಪಾತ, ರಾಜಾಶೀಟ್ ಹಾಗೂ ದೇವದರ್ಶಿನಿ ಪ್ಯಾಕೇಜ್‌ನಲ್ಲಿ ನಂಜನಗೂಡು, ತಲಕಾಡು, ಮೂರು ಕುದುರೆ, ಕೆಆರ್‌ಎಸ್, ಸೋಮನಾಥಪುರ, ಶ್ರೀರಂಗಪಟ್ಟಣ ವೀಕ್ಷಣೆಗೆ ಅವಕಾಶ ಇರಲಿದೆ.
ಅ 11 ರಿಂದ 21 ರವರೆಗೆ ಉಚ್ಚಿಲ ದಸರಾ - ಅ. 12 ರಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗಿ…
ಕಾನೂನುಬದ್ಧ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿದರೆ ಸೂಕ್ತ ಕ್ರಮ: ಮಂಗಳೂರು ಪೊಲೀಸ್ ಕಮಿಷನರ್ ಎಚ್ಚರಿಕೆ ಮಂಗಳೂರು: ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಕಾನೂನುಬದ್ಧವಾಗಿ ಅನುಮತಿ…
ಉಡುಪಿ : ಯುವತಿ ನಾಪತ್ತೆ ಉಡುಪಿ: ಉಡುಪಿಯ ಬೀಡಿನಗುಡ್ಡೆ ಹುಲ್ಲಿಕೇರಿ ಪರಿಸರದಲ್ಲಿ ವಾಸವಾಗಿದ್ದ ಐಶ್ವರ್ಯ (18) ಎನ್ನುವ ಯುವತಿಯು ಮನೆಗೆಲಸ…
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…