ಮೊದಲ ಸುತ್ತಿನ ಗ್ರಾಮ ಪಂಚಾಯತ್ ಚುನಾವಣೆ- ಬಿಜೆಪಿಯ ಆಂತರಿಕ ಸಮೀಕ್ಷೆ ಬಿಜೆಪಿಯದ್ದೇ ಸಿಂಹಪಾಲು : ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ಜಿಲ್ಲೆಯಲ್ಲಿ ಮೊದಲ ಸುತ್ತಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯ ಆಂತರಿಕ ಸಮೀಕ್ಷೆ ಪ್ರಕಾರ ಬಿಜೆಪಿಯದ್ದೇ ಸಿಂಹಪಾಲು ಎಂದು ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಇಂದು ನಡೆದ ಕಾಪು ವಿಧಾನಸಭಾ ಕ್ಷೇತ್ರದ 10 ಪಂಚಾಯತ್ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ, ಉಡುಪಿ ವಿಧಾನಸಭಾ ಕ್ಷೇತ್ರದ ಇಂದು ನಡೆದ 19 ಪಂಚಾಯಿತಿಗಳಲ್ಲಿ 15 ಪಂಚಾಯಿತಿಯಲ್ಲಿ ಬಿಜೆಪಿಯ ತೆಕ್ಕೆಗೆ ಸೇರಲಿದೆ ಮತ್ತು ಹೆಬ್ರಿಯಲ್ಲಿ ಏಳು ಪಂಚಾಯತಿ ಹಾಗೂ ಕುಂದಾಪುರದಲ್ಲಿ ಮೂವತ್ತನಾಲ್ಕು ಪಂಚಾಯತ್ಗಳಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಇಡೀ ಜಿಲ್ಲೆಯಲ್ಲಿ ಮುಂದಿನ ಎರಡನೇ ಹಂತದ ಮತದಾನದ ಲೆಕ್ಕಚಾರದ ಸಮೀಕ್ಷೆ ಪ್ರಕಾರ 150 ಗ್ರಾಮ ಪಂಚಾಯತಿಗಳ ಪೈಕಿ 130 ಪಂಚಾಯತ್ ಗಳಲ್ಲಿ ಬಿಜೆಪಿ ಚುಕ್ಕಾಣಿ ಹಿಡಿಯುವ ಭರವಸೆ ಇದೆ ಎಂದರು.
