ಮೋದಿಯನ್ನು ಸ್ವಾಗತಿಸಲು ಚೌಕೀದಾರ್ ಸಮವಸ್ತ್ರ ಧರಿಸಿದ ಹರೀಶ್ ಪೂಂಜಾ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು, :ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವ ಬೃಹತ್ ರ್ಯಾಲಿಗೆ ಭರ್ಜರಿ ಸಿದ್ಧತೆ ನಡೆದಿದೆ. ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ, ಸಂಜೆ 4 ಗಂಟೆಗೆ ಮೈದಾನ ತಲುಪಲಿದ್ದಾರೆ.

ಈ ನಿಟ್ಟಿನಲ್ಲಿ ಬಿಜೆಪಿ ಜಿಲ್ಲಾ ಘಟಕ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ಜೊತೆಗೆ ರಾಜ್ಯದ ಹಲವು ಪ್ರಬಲ ನಾಯಕರು ಸೇರಿಕೊಳ್ಳಲಿದ್ದಾರೆ.

ಮೋದಿ ಆಗಮನದ ಹಿನ್ನೆಲೆಯಲ್ಲಿ, ಬೆಳ್ತಂಗಡಿ ಬಿಜೆಪಿ ಘಟಕ ಮೈ ಭೀ ಚೌಕೀದಾರ್ ಅಭಿಯಾನ ನಡೆಸಲು ನಿರ್ಧರಿಸಿದ್ದು, ಇಂದು ಪ್ರಧಾನಿ ಮೋದಿಯೆದುರು ಈ ಅಭಿಯಾನವನ್ನು ವಿಶೇಷ ರೀತಿಯಲ್ಲಿ ಅನಾವರಣಗೊಳಿಸಲು ಸಿದ್ಧತೆ ನಡೆಸಿದ್ದಾರೆ.

ಕಡಲ ನಗರಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರೂ ಸೇರಿದಂತೆ ಸಾವಿರಕ್ಕೂ  ಬಿಜೆಪಿ ಕಾರ್ಯಕರ್ತರು ಇಂದು ಮೈ ಭೀ ಚೌಕೀದಾರ್ ಎನ್ನುವ ಹೆಸರು ಪಟ್ಟಿಯೊಂದಿಗೆ ಕಾವಲುಗಾರನ ಸಮವಸ್ತ್ರದಲ್ಲಿ ಮಿಂಚಲಿದ್ದಾರೆ.

ಈಗಾಗಲೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತನ್ನ ಚೌಕೀದಾರ್ ಸಮವಸ್ತ್ರದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಭಾರೀ ವೈರಲ್ ಆಗಿದೆ.