ಮೋದಿಯವರು ಮತ್ತೊಮ್ಮೆ ಭಾರತದ ಪ್ರಧಾನಿಯಾಗಿರುವುದು ದೇಶಕ್ಕೆ ಒಳ್ಳೆಯದಾಗುವ ಸೂಚನೆಯನ್ನು ದೇವರು ಕೊಟ್ಟಿದ್ದಾರೆ : ಜನಾರ್ಧನರೆಡ್ಡಿ -Vishwanews24
ರಾಯಚೂರು,:ನರೇಂದ್ರ ಮೋದಿಯವರು ಮತ್ತೊಮ್ಮೆ ಭಾರತದ ಪ್ರಧಾನಿಯಾಗಿರುವುದು ದೇಶಕ್ಕೆ ಒಳ್ಳೆಯದಾಗುವ ಸೂಚನೆ ಎಂದು ಮಾಜಿ ಸಚಿವ ಜನಾರ್ಧನರೆಡ್ಡಿ ಹೇಳಿದರು.
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಗವಂತ ಆಂಧ್ರಪ್ರದೇಶ ಹಾಗೂ ಭಾರತಕ್ಕೆ ಒಳ್ಳೆಯದನ್ನು ಮಾಡಿದ್ದಾನೆ.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ. ಈ ಮೂಲಕ ದೇಶಕ್ಕೆ ಒಳ್ಳೆಯದಾಗುವ ಸೂಚನೆಯನ್ನು ದೇವರು ಕೊಟ್ಟಿದ್ದಾರೆ ಎಂದು ಹೇಳಿದರು. ವೈ.ಎಸ್.ರಾಜಶೇಖರ್‍ರೆಡ್ಡಿ ದೇವರ ಸ್ವರೂಪವಾಗಿದ್ದರು, ಅಂತಹ ಮಹಾನುಭಾವರ ಮಗ ಜಗನ್‍ಮೋಹನ್ ರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುತ್ತಿದ್ದಾರೆ.
ಇದು ನನ್ನೊಬ್ಬನ ಹರಕೆಯಲ್ಲ, ಇಡೀ ಆಂಧ್ರದ ಜನರ ಹಾರೈಕೆಯಾಗಿದೆ. ಹಾಗಾಗಿ ಅವರನ್ನು ಅತಿ ಹೆಚ್ಚು ಸ್ಥಾನದಲ್ಲಿ ಗೆಲ್ಲಿಸಿದ್ದಾರೆ ಎಂದು ಹೇಳಿದರು. ರಾಯರಿಗೆ ಚಿನ್ನದ ರಥೋತ್ಸವ ಮಾಡಿಸುವುದಾಗಿ ಹರಕೆ ಹೊತ್ತುಕೊಂಡಿದ್ದೆ. ಹಾಗಾಗಿ ಈ ರಥೋತ್ಸವವನ್ನು ನೆರವೇರಿಸುವ ಮೂಲಕ ನನ್ನ ಹರಕೆ ತೀರಿಸಿದ್ದೇನೆ ಎಂದು ಹೇಳಿದರು.
